10 ಲಕ್ಷ ದಾಟಿದ ಕೋವಿಡ್-19 ಪರೀಕ್ಷೆಗಳ ಸಂಖ್ಯೆ

Update: 2020-05-02 17:52 GMT

ಹೊಸದಿಲ್ಲಿ,ಮೇ 2: ಭಾರತವು ಕೋವಿಡ್-19 ಪರೀಕ್ಷೆಗಳ ಸಂಖ್ಯೆ ಶನಿವಾರ ಹತ್ತು ಲಕ್ಷವನ್ನು ದಾಟುವುದರೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶಾದ್ಯಂತ 419 ಲ್ಯಾಬ್‌ಗಳು ಈ ಕಾರ್ಯದಲ್ಲಿ ನಿರತವಾಗಿದ್ದು, ದೈನಂದಿನ ಪರೀಕ್ಷೆಗಳ ಸಂಖ್ಯೆ 75,000ವನ್ನು ತಲುಪಿದೆ.

ಕಳೆದ 40 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಸರಕಾರವು ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸಲು ಮೆಡಿಕಲ್ ಕಾಲೇಜುಗಳು,ಲ್ಯಾಬ್‌ಗಳು ಮತ್ತು ಆಸ್ಪತ್ರೆಗಳಿಗೆ ನೆರವಾಗಲು ಮತ್ತು ಅವುಗಳನ್ನು ತರಬೇತುಗೊಳಿಸಲು ಏಮ್ಸ್,ಪಿಜಿಐ ಚಂಡಿಗಡ,ಸಿಎಂಸಿ ವೆಲ್ಲೂರು,ಏಮ್ಸ್ ಭುವನೇಶ್ವರದಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಒತ್ತು ನೀಡಿತ್ತು. ಜೊತೆಗೆ ದೇಶಾದ್ಯಂತ ಹರಡಿಕೊಂಡಿರುವ 15 ಸಂಸ್ಥೆಗಳು ಈ ಲ್ಯಾಬ್‌ಗಳಿಗೆ ಟೆಸ್ಟಿಂಗ್ ಕಿಟ್‌ಗಳು/ಸಾಮಗ್ರಿಗಳನ್ನು ಪೂರೈಸಲು ಡಿಪೋಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News