ಇಟಲಿ: ಅತಿ ದೀರ್ಘಾವಧಿಯ ಬೀಗಮುದ್ರೆ ಕೊಂಚ ಸಡಿಲ

Update: 2020-05-04 16:55 GMT

ರೋಮ್ (ಇಟಲಿ), ಮೇ 4: ಜಗತ್ತಿನಲ್ಲೇ ಅತಿ ದೀರ್ಘಾವಧಿಯ ಕೊರೋನ ವೈರಸ್ ಬೀಗಮುದ್ರೆಯನ್ನು ಇಟಲಿ ಸೋಮವಾರ ಸಡಿಲಗೊಳಿಸಿದೆ. ಒಂಭತ್ತು ವಾರಗಳಲ್ಲೇ ಮೊದಲ ಬಾರಿಗೆ ಹೊರಗಡೆ ತಿರುಗಾಡಲು ಹಾಗೂ ಬಂಧುಗಳನ್ನು ನೋಡಲು ಜನರಿಗೆ ಅವಕಾಶ ನೀಡಲಾಗಿದೆ.

ಸುಮಾರು 40 ಲಕ್ಷ ಮಂದಿ ತಮ್ಮ ನಿರ್ಮಾಣ ಕಾಮಗಾರಿ ಸ್ಥಳಗಳು ಮತ್ತು ಕಾರ್ಖಾನೆಗಳಿಗೆ ತೆರಳಲಿದ್ದಾರೆ. ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಮುದುಡಿಹೋಗಿರುವ ಇಟಲಿಯನ್ನರು ತಮ್ಮ ದೈನಂದಿನ ಬದುಕಿಗೆ ಮರಳಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಯುರೋಪ್‌ನಲ್ಲೇ ಇಟಲಿಯು ಕೊರೋನ ವೈರಸ್‌ನಿಂದ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ಅಲ್ಲಿ ಅಧಿಕೃತವಾಗಿ 29,000ಕ್ಕೂ ಅಧಿಕ ಮಂದಿ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ. ಆದರೆ, ಮೃತರ ನೈಜ ಸಂಖ್ಯೆ ಇನ್ನೂ ಕೆಲವು ಸಾವಿರ ಹೆಚ್ಚಿರಬಹುದು ಎಂದು ಹೇಳಲಾಗಿದೆ. ಅಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 174 ಸಾವುಗಳು ಸಂಭವಿಸಿವೆ.

ಕೊರೋನ ವೈರಸ್ ಬಿಕ್ಕಟ್ಟಿನ ವೇಳೆ ನಲುಗಿ ಹೋಗಿರುವ ರೆಸ್ಟೋರೆಂಟ್‌ಗಳು ಸೋಮವಾರ ತೆರೆದಿವೆ. ಆದರೆ, ಅವುಗಳು ಆಹಾರಗಳನ್ನು ತಯಾರಿಸಿ ಹೊರಗಡೆ ತಿನ್ನಲು ಪೊಟ್ಟಣಗಳಲ್ಲಿ ಕಟ್ಟಿಕೊಡಬೇಕಾಗಿದೆ.

ಸಾರ್ವಜನಿಕ ಸಾರಿಗೆ ಆರಂಭವಾಗಿಲ್ಲ. ಎಲ್ಲರೂ ಸುರಕ್ಷಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News