ಕ್ರೀಸ್ ಚೆನ್ನಾಗಿ ಬಳಸಿಕೊಳ್ಳಿ

Update: 2020-05-05 07:16 GMT

ಹೊಸದಿಲ್ಲಿ, ಮೇ 4: ಯಜುವೇಂದ್ರ ಚಹಾಲ್ ವಿಶ್ವ ಕ್ರಿಕೆಟ್‌ನ ಓರ್ವ ಪ್ರಮುಖ ಲೆಗ್ ಸ್ಪಿನ್ನರ್ ಆಗಿದ್ದು, ಆದರೆ ಅವರು ಕ್ರೀಸ್‌ನ್ನು ಉತ್ತಮವಾಗಿ ಬಳಸಿಕೊಂಡರೆ ಇನ್ನಷ್ಟು ಪರಿಣಾಮಕಾರಿ ಬೌಲರ್ ಆಗಬಹುದು ಎಂದು ಪಾಕಿಸ್ತಾನ ಮಾಜಿ ಸ್ಪಿನ್ನರ್ ಮುಷ್ತಾಕ್ ಅಹ್ಮದ್ ಸಲಹೆ ನೀಡಿದ್ದಾರೆ.

ವಿಶ್ವದ ಹೆಚ್ಚಿನೆಲ್ಲಾ ತಂಡಗಳಿಗೆ ಕೋಚಿಂಗ್ ನೀಡಿರುವ ಅಹ್ಮದ್, ಪ್ರಸ್ತುತ ಪಾಕಿಸ್ತಾನ ತಂಡಕ್ಕೆ ಸಲಹೆಗಾರರಾಗಿದ್ದಾರೆ.

ಸೀಮಿತ ಓವರ್ ಮಾದರಿ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವಿದೆ. ಚಹಾಲ್ ಹಾಗೂ ಕುಲದೀಪ ಯಾದವ್ ಪಂದ್ಯದ ಚಿತ್ರಣ ಬದಲಿಸಬಲ್ಲರು ಎಂದು ಅಹ್ಮದ್ ಹೇಳಿದ್ದಾರೆ.

2017ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಈ ಇಬ್ಬರು ಸ್ಪಿನ್ನರ್‌ಗಳು ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಚಹಾಲ್ ಹಾಗೂ ಕುಲದೀಪ್ ಒಟ್ಟಿಗೆ ಆಡಿಲ್ಲ.

‘‘ಚಹಾಲ್ ಓರ್ವ ಉತ್ತಮ ಬೌಲರ್. ಆದರೆ, ಅವರು ಕ್ರೀಸನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬೇಕು. ಪಿಚ್‌ನ್ನು ಅರ್ಥಮಾಡಿಕೊಳ್ಳಲು ನೀವು ಚುರುಕಾಗಿರಬೇಕು. ಫ್ಲಾಟ್ ಪಿಚ್ ಆಗಿದ್ದರೆ, ನೀವು ಸ್ಟಂಪ್‌ಗೆ ಸ್ಟಂಪ್ ಬೌಲಿಂಗ್ ಮಾಡಬೇಕು’’ಎಂದು ಪಾಕಿಸ್ತಾನ ಕಂಡ ಅತ್ಯುತ್ತಮ ಲೆಗ್ ಸ್ಪಿನ್ನರ್ ಅಹ್ಮದ್ ಪಿಟಿಐಗೆ ತಿಳಿಸಿದರು.

 ಚಹಾಲ್ 25.83ರ ಸರಾಸರಿಯಲ್ಲಿ 52 ಏಕದಿನ ಪಂದ್ಯಗಳಲ್ಲಿ 91 ವಿಕೆಟ್‌ಗಳನ್ನು ಪಡೆದಿದ್ದಾರೆ. 42 ಟ್ವೆಂಟಿ-20 ಪಂದ್ಯಗಳಲ್ಲಿ 24.34ರ ಸರಾಸರಿಯಲ್ಲಿ 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಹಾಲ್ ವಿಭಿನ್ನ ಶೈಲಿಯಲ್ಲಿ ಬೌಲಿಂಗ್ ಮಾಡುವಲ್ಲಿ ನಿಷ್ಣಾತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News