ಕೊರೋನ ಹೋರಾಟದಲ್ಲಿ ವಿಕಲಚೇತನರ ಬಗ್ಗೆ ಗಮನವಿರಲಿ : ಆಂಟೋನಿಯೊ ಗುಟೆರಸ್ ಕರೆ

Update: 2020-05-06 16:09 GMT

ವಿಶ್ವಸಂಸ್ಥೆ, ಮೇ 6: ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೋಟ್ಯಂತರ ವಿಕಲಚೇತನರನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಜಗತ್ತಿನಾದ್ಯಂತದ ಸರಕಾರಗಳಿಗೆ ಬುಧವಾರ ಕರೆ ನೀಡಿದ್ದಾರೆ.

ಸಾಮಾನ್ಯ ಪರಿಸ್ಥಿತಿಯಲ್ಲಿಯೂ, ದೈಹಿಕ ಅಸಾಮರ್ಥ್ಯ ಹೊಂದಿರುವ ಜನರಿಗೆ ಶಿಕ್ಷಣ, ಆರೊಗ್ಯರಕ್ಷಣೆ, ಆದಾಯ ಗಳಿಕೆ ಕ್ಷೇತ್ರಗಳಲ್ಲಿ ಹಾಗೂ ಸಾಮುದಾಯಿಕ ಕೂಡಾಟದಲ್ಲಿ ಅವಕಾಶಗಳು ದೊರೆಯುವುದು ಕಡಿಮೆಯಾಗಿದೆ ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.

ಈ ಸಾಂಕ್ರಾಮಿಕವು ಈಗಾಗಲೇ ಚಾಲ್ತಿಯಲ್ಲಿರುವ ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಿದೆ ಹಾಗೂ ಹೊಸ ಬೆದರಿಕೆಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News