×
Ad

ಬೀಗಮುದ್ರೆ ಸಡಿಲಿಕೆ ಬೆನ್ನಿಗೇ ಕಚ್ಚಾ ತೈಲ ದರದಲ್ಲಿ ಏರಿಕೆ

Update: 2020-05-06 21:47 IST

ದುಬೈ, ಮೇ 6: ಕೆಲವು ಯುರೋಪ್ ಮತ್ತು ಏಶ್ಯದ ದೇಶಗಳು ಕೊರೋನ ವೈರಸ್ ಬೀಗಮುದ್ರೆಯನ್ನು ಸಡಿಲಗೊಳಿಸಲು ಆರಂಭಿಸಿದ ಬೆನ್ನಿಗೇ, ಮಂಗಳವಾರ ತೈಲ ಬೆಲೆ ಏರು ಗತಿಯಲ್ಲಿ ಸಾಗಿತು.

ಜಗತ್ತಿನಾದ್ಯಂತ ತೈಲ ಬೇಡಿಕೆ ಎಪ್ರಿಲ್‌ನಲ್ಲಿ 30 ಶೇಕಡದಷ್ಟು ಕಡಿಮೆ ಇತ್ತು. ಆದರೆ, ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸಲು ನಡೆಸಲಾಗುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ತೈಲ ಬೇಡಿಕೆ ನಿಧಾನವಾಗಿ ಏರುತ್ತಿದೆ.

ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರಲ್‌ಗೆ 3.77 ಡಾಲರ್‌ನಷ್ಟು, ಅಂದರೆ 13.9 ಶೇಕಡದಷ್ಟು ಹೆಚ್ಚಾಗಿ 30.97 ಡಾಲರ್ ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯಟ್ (ಡಬ್ಲ್ಯುಟಿಐ) ಕಚ್ಚಾ ತೈಲ ದರವು ಬ್ಯಾರಲ್‌ಗೆ 4.17 ಡಾಲರ್‌ನಷ್ಟು ಹೆಚ್ಚಿದ್ದು, 24.56 ಡಾಲರ್ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News