×
Ad

ಹೊಸ ಕಂಪೆನಿಗಳಿಗೆ 1,200 ದಿನಗಳ ಕಾಲ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಿದ ಗುಜರಾತ್

Update: 2020-05-09 18:37 IST

ಅಹ್ಮದಾಬಾದ್ : ಲಾಕ್ ಡೌನ್ ತೆರವುಗೊಂಡ ನಂತರ ಹೂಡಿಕೆಗಳನ್ನು ಆಕರ್ಷಿಸುವ ಯತ್ನವಾಗಿ ಮೂರು ಕಾರ್ಮಿಕ ಕಾನೂನುಗಳನ್ನು ಹೊರತುಪಡಿಸಿ ಉಳಿದ ಕಾನೂನುಗಳಿಂದ ಯೋಜನೆಗಳಿಗೆ ವಿನಾಯಿತಿ ನೀಡುವುದಾಗಿ ಗುಜರಾತ್ ಸರಕಾರ ಶುಕ್ರವಾರ ಘೋಷಿಸಿದೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸರಕಾರಗಳು ಇಂತಹುದೇ ಕ್ರಮಗಳನ್ನು ಕೈಗೊಂಡ ಬೆನ್ನಿಗೆ ಗುಜರಾತ್ ಸರಕಾರದ ಈ ನಿರ್ಧಾರಕ್ಕೆ ಬಂದಿದೆ.

ಕನಿಷ್ಠ ವೇತನ ಪಾವತಿ, ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಕೈಗಾರಿಕಾ ದುರಂತಗಳ ಸನ್ನಿವೇಶದಲ್ಲಿ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವ ಕುರಿತಾದ ಕಾನೂನುಗಳ ಹೊರತಾಗಿ ಕಾರ್ಮಿಕ ಕಾನೂನುಗಳ ಬೇರೆ ಯಾವುದೇ ಅಂಶವೂ ರಾಜ್ಯದಲ್ಲಿ ಕನಿಷ್ಠ 1200 ದಿನಗಳ ತನಕ ಕಾರ್ಯಾಚರಿಸಲು ಬಯಸುವ ಅಥವಾ ಈ ಅವಧಿ ತನಕ ಕಾರ್ಯಾಚರಿಸುವ ಎಲ್ಲಾ ಹೊಸ ಕಂಪೆನಿಗಳಿಗೆ ಅನ್ವಯಿಸುವುದಿಲ್ಲ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

ಚೀನಾದಿಂದ ತಮ್ಮ ಸಂಸ್ಥೆಗಳನ್ನು ಸ್ಥಳಾಂತರಗೊಳಿಸಲು ಬಯಸುವ ಕಂಪೆನಿಗಳಿಗೆ 33,000 ಹೆಕ್ಟೇರ್ ಜಮೀನನ್ನು ಗುರುತಿಸಲಾಗಿದ್ದು, ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

“ಇಂತಹ ಕಂಪೆನಿಗಳಿಗೆ ಆನ್‍ಲೈನ್ ಮೂಲಕ ಅನುಮೋದನೆ ನೀಡಲಾಗುವುದು ಹಾಗೂ ಎಲ್ಲಾ ಹೊಸ  ವಿನಾಯಿತಿಗಳು ಅವುಗಳು ಕಾರ್ಯಾಚರಣೆ ಆರಂಭಿಸಿದ ದಿನದಿಂದ ಅನ್ವಯವಾಗುವುದು. ಈ ನಿಟ್ಟಿನಲ್ಲಿ ಹೊಸ ಅಧ್ಯಾಧೇಶ ಜಾರಿಗೆ ತರಲಾಗುವುದು'' ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News