ಅಮೆರಿಕ: 24 ಗಂಟೆಯಲ್ಲಿ 1,635 ಸಾವು
Update: 2020-05-09 22:13 IST
ವಾಶಿಂಗ್ಟನ್, ಮೇ 9: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,635 ಮಂದಿ ಕೊರೋನ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಸಂಖ್ಯೆಗಳು ಶುಕ್ರವಾರ ತಿಳಿಸಿವೆ.
ಇದರೊಂದಿಗೆ ದೇಶದಲ್ಲಿ ಈ ಮಾರಕ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 77,178ಕ್ಕೆ ಏರಿದೆ.
ಕೊರೋನ ವೈರಸ್‌ನ ಹೊಡೆತಕ್ಕೆ ಅತಿ ಹೆಚ್ಚು ನಲುಗಿದ ದೇಶ ಅಮೆರಿಕವಾಗಿದೆ. ಅಲ್ಲಿ ಈವರೆಗೆ ಒಟ್ಟು 12,83,829 ಕೊರೋನ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ತಿಳಿಸಿದೆ.