×
Ad

ರಸ್ತೆ ಬದಿ ನಿಲ್ಲಿಸಿದ್ದ ತರಕಾರಿ ಗಾಡಿಯನ್ನು ಉದ್ದೇಶಪೂರ್ವಕವಾಗಿ ಉರುಳಿಸಿದ ಉತ್ತರಪ್ರದೇಶ ಪೊಲೀಸ್

Update: 2020-05-11 11:20 IST
ಚಿತ್ರ ಕೃಪೆ: ಎನ್‌ಡಿಟಿವಿ

 ಮೀರತ್,ಮೇ 11:ಪಶ್ಚಿಮ ಉತ್ತರಪ್ರದೇಶದ ಮೀರತ್‌ನಲ್ಲಿ ಕೊರೋನ ವೈರಸ್ ಹಾಟ್‌ಸ್ಪಾಟ್ ಸಮೀಪದ ದಾರಿ ಬದಿ ನಿಲ್ಲಿಸಿದ್ದ ತರಕಾರಿ ತುಂಬಿಸಿದ್ದ ಗಾಡಿಗಳನ್ನು ಪೊಲೀಸರ ತಂಡವೊಂದು ಉದ್ದೇಶಪೂರ್ವಕವಾಗಿ ಉರುಳಿಸುತ್ತಿದ್ದ 4 ಸೆಕೆಂಡ್‌ಗಳ ವೀಡಿಯೊ ವೈರಲ್ ಆಗಿದ್ದು,ಉತ್ತರಪ್ರದೇಶದ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಮೀರತ್‌ನ ಇಕ್ಕಟ್ಟಾದ ಓಣಿಯಲ್ಲಿ ಸಾಗುತ್ತಿದ್ದ ಪೊಲೀಸರ ಗುಂಪು ದಾರಿ ಬದಿಯಲ್ಲಿ ನಿಲ್ಲಿಸಿದ್ದ ತರಕಾರಿ ಗಾಡಿಗಳನ್ನು ಉದ್ದೇಶಪೂರ್ವಕವಾಗಿ ಉರುಳಿಸುತ್ತಿರುವ ದ್ಯಶ್ಯವನ್ನು ಮನೆಯ ಟೆರೇಸ್‌ನಿಂದ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು.

ಕೋವಿಡ್-9ಹಾಟ್‌ಸ್ಪಾಟ್ ಪ್ರದೇಶದ ಸಮೀಪ ಇದು ನಡೆದಿದೆ.ಈ ವೀಡಿಯೊದ ಹಲವು ಅಂಶಗಳು ಗೊತ್ತಾಗಿದ್ದು,ಇದನ್ನು ತನಿಖೆಗೆ ಪರಿಗಣಿಸುವಂತೆ ಆದೇಶಿಸಿದ್ದೇನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಡಾ.ಅಖಿಲೇಶ್ ನಾರಾಯಣ ಸಿಂಗ್ ಹೇಳಿದ್ದಾರೆ.

 ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೋವಿಡ್ ಪೀಡಿತ 5 ಜಿಲ್ಲೆಗಳ ಪೈಕಿ ಮೀರತ್ ಕೂಡ ಒಂದಾಗಿದ್ದು,ಇಲ್ಲಿ 242ಪ್ರಕರಣಗಳು ಬೆಳಕಿಗೆ ಬಂದಿದೆ. ಉತ್ತರಪ್ರದೇಶ 7 ಜಿಲ್ಲೆಗಳಲ್ಲಿ 30ಕ್ಕೂ ಅಧಿಕ ಹಾಟ್‌ಸ್ಪಾಟ್ ಗುರುತಿಸಿದೆ.ಈ ಪ್ರದೇಶದಲ್ಲಿ ಸೀಲ್‌ಡೌನ್ ‌ಮುಂದುರಿಯಲಿದ್ದ್ದು,ಸ್ಥಳೀಯಾಡಳಿತ ಈ ಪ್ರದೇಶಗಳಲ್ಲಿ ಅಗತ್ಯದ ವಸ್ತುಗಳಾದ ತರಕಾರಿ,ಹಾಲುಗಳನ್ನು ಮನೆ ಮನೆಗೆ ಪೂರೈಸಲು ವ್ಯವಸ್ಥೆ ಮಾಡಬೇಕೆಂದು ರಾಜ್ಯ ಸರಕಾರ ಆದೇಶಿಸಿದೆ.ಆದರೆ,ಪೊಲೀಸರೇ ಹಾಟ್‌ಸ್ಪಾಟ್ ಪ್ರದೇಶದ ಸಮೀಪ ನಿಲ್ಲಿಸಲಾಗಿದ್ದ ತರಕಾರಿ ಗಾಡಿಯನ್ನೇ ಉರುಳಿಸಿ ಹಾಕುತ್ತಿರುವುದು ವೀಡಿಯೊದಲ್ಲಿದೆ.ಪೊಲೀಸರ ಈ ವರ್ತನೆಗೆ ಸ್ಥಳೀಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಈ ಪ್ರದೇಶ ಸುಮಾರು 2 ತಿಂಗಳುಗಳಿಂದ ಬಂದ್ ಆಗಿದೆ.ಆಹಾರವೂ ಇಲ್ಲ,ಕೆಲಸವೂ ಇಲ್ಲವಾಗಿದೆ. ತಾರತಮ್ಯರಹಿತ ತನಿಖೆ ನಡೆಸಲು ಆಡಳಿತಕ್ಕೆ ಮನವಿ ಮಾಡುವೆ.ಪೊಲೀಸರು ಈರೀತಿ ವರ್ತಿಸಿದರೆ ಜನರಿಗೆ ಅಗತ್ಯ ವಸ್ತುಗಳು ತಲುಪುವುದು ಹೇಗೆ?"ಎಂದು ಸ್ಥಳೀಯ ಸಮಾಜವಾದಿ ಪಕ್ಷದ ಶಾಸಕ ಹಾಜಿ ರಫೀಕ್ ಅನ್ಸಾರಿ ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News