×
Ad

ಇದುವರೆಗೂ ಕೇಂದ್ರ ಸರಕಾರ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಒದಗಿಸಿಲ್ಲ: ದಿಲ್ಲಿ ಆರೋಗ್ಯ ಸಚಿವರ ದೂರು

Update: 2020-05-14 14:15 IST

ಹೊಸದಿಲ್ಲಿ : ರಾಜಧಾನಿ ದಿಲ್ಲಿಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ ಇಂದು ಹೇಳಿಕೆ ನೀಡಿರುವ  ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಕೇಂದ್ರವು ರ್ಯಾಪಿಡ್  ಟೆಸ್ಟಿಂಗ್ ಕಿಟ್‍ ಗಳನ್ನು ಒದಗಿಸಿಲ್ಲ ಎಂದು ದೂರಿದ್ದಾರೆ. ಸದ್ಯ ಲಭ್ಯವಿರುವ ಆರ್‍ಟಿ-ಪಿಸಿಆರ್ ಟೆಸ್ಟ್ ಕ್ಲಿಷ್ಟಕರ ಎಂದೂ ಅವರು ಹೇಳಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದಿಲ್ಲಿಯಲ್ಲಿ ಕೋವಿಡ್-19ಗೆ 9 ಮಂದಿ ಬಲಿಯಾಗಿದ್ದು ಈ ಸೋಂಕಿಗೆ ಮೃತಪಟ್ಟವರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ರಾಜಧಾನಿಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಬಳಸಿ ಹೆಚ್ಚೆಚ್ಚು ಮಂದಿಯನ್ನು ಕೊರೋನ ಪರೀಕ್ಷೆಗೊಳಪಡಿಸಬೇಕಿದೆ. ಆದರೆ  ಸರಕಾರ ನಡೆಸಲು ಹೇಳಿರುವ ಆರ್‍ಟಿ-ಪಿಸಿಆರ್ ಪರೀಕ್ಷೆ ಕ್ಲಿಷ್ಟಕರವಾಗಿರುವುದರಿಂದ ಹಲವರು ಈ ಪರೀಕ್ಷೆಗೊಳಪಡಲು  ಮನಸ್ಸು ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News