ಪಿಎಂ ಕೇರ್ಸ್ ನಿಧಿಯಿಂದ ತೀವ್ರ ಬಾಧಿತ ರಾಜ್ಯಗಳಿಗೆ 1,000 ಕೋ.ರೂ.ನೀಡಲು ಮಾಯಾವತಿ ಆಗ್ರಹ

Update: 2020-05-14 16:00 GMT

ಲಕ್ನೋ,ಮೇ 14: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ತೆಗೆದುಕೊಂಡಿರುವ ಕ್ರಮಗಳು ತಳಮಟ್ಟಕ್ಕೆ ತಲುಪುವಂತಾಗಲು ತಕ್ಷಣದ ಮತ್ತು ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಹೇಳಿದ್ದಾರೆ.

ವಲಸೆ ಕಾರ್ಮಿಕರಿಗಾಗಿ ಪಿಎಂ-ಕೇರ್ಸ್ ನಿಧಿಯಿಂದ ಪ್ರಕಟಿಸಲಾಗಿರುವ 1,000 ಕೋ.ರೂ.ಗಳನ್ನು ಉತ್ತರ ಪ್ರದೇಶದಂತಹ ತೀವ್ರ ಬಾಧಿತ ರಾಜ್ಯಗಳಿಗೆ ನೇರವಾಗಿ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ 3,100 ಕೋ.ರೂ.ಗಳನ್ನು ಹಂಚಿಕೆ ಮಾಡಲು ಪಿಎಂ-ಕೇರ್ಸ್ ನಿಧಿಯು ಬುಧವಾರ ನಿರ್ಧರಿಸಿದೆ. ಈ ಪೈಕಿ ಸುಮಾರು 2,000 ಕೋ.ರೂ.ಗಳನ್ನು ‘ಮೇಡ್ ಇನ್ ಇಂಡಿಯಾ’ ವೆಂಟಿಲೇಟರ್‌ಗಳ ಖರೀದಿಗೆ ಮತ್ತು 1,000 ಕೋ.ರೂ.ಗಳನ್ನು ವಲಸೆ ಕಾರ್ಮಿಕರ ಹಿತರಕ್ಷಣೆಗಾಗಿ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News