ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕ ಕಾನೂನುಗಳ ಅಮಾನತು: ಪ್ರತಿಭಟನೆಗೆ ಆರೆಸ್ಸೆಸ್ ಬೆಂಬಲಿತ ಬಿಎಂಎಸ್ ಸಜ್ಜು

Update: 2020-05-14 17:50 GMT

 ಹೊಸದಿಲ್ಲಿ,ಮೇ 14: ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ಹಿಂದೆಗೆದುಕೊಂಡಿರುವುದನ್ನು ಗುರುವಾರ ಖಂಡಿಸಿರುವ ಸಂಘ ಪರಿವಾರದ ಕಾರ್ಮಿಕ ಒಕ್ಕೂಟ ಬಿಎಂಎಸ್,ಇದರ ವಿರುದ್ಧ ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸುವುದಾಗಿ ಪ್ರಕಟಿಸಿದೆ.

ಕೊರೋನ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳ ಉಲ್ಬಣಕ್ಕೆ ಹೆಚ್ಚಿನ ರಾಜ್ಯಗಳು ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದು ಪ್ರಮುಖ ಕಾರಣವಾಗಿದೆ ಎಂದೂ ಬಿಎಂಎಸ್ ಹೇಳಿದೆ.

ಹೇಳಿಕೆಯೊಂದರಲ್ಲಿ ಕಾರ್ಮಿಕ ಕಾನೂನುಗಳ ಸ್ತಂಭನ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಕೆಲಸದ ಅವಧಿಯನ್ನು 8 ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸಿರುವುದನ್ನು ಟೀಕಿಸಿರುವ ಬಿಎಂಎಸ್ ಪ್ರಧಾನ ಕಾರ್ಯದರ್ಶಿ ವಿರಜೇಶ ಉಪಾಧ್ಯಾಯ ಅವರು,ಇತರ ಹಲವು ರಾಜ್ಯಗಳೂ ಇದೇ ಪ್ರವೃತ್ತಿಯನ್ನು ಅನುಸರಿಸಲು ಸಜ್ಜಾಗಿವೆ ಎಂದು ತಿಳಿದು ಬಂದಿದೆ. ಇಂತಹುದನ್ನು ಇತಿಹಾಸದಲ್ಲೆಂದೂ ಕೇಳಿರಲಿಲ್ಲ ಮತ್ತು ಹೆಚ್ಚಿನ ಪ್ರಜಾಪ್ರಭುತ್ವ ವಿರೋಧಿ ದೇಶಗಳಲ್ಲಿಯೂ ಇದು ಅಪರೂಪವಾಗಿದೆ ಎಂದು ಹೇಳಿದ್ದಾರೆ.

ಬಿಎಂಎಸ್ ಇತರ ಪ್ರತಿಭಟನಾ ಕಾರ್ಯಕ್ರಮಗಳೊಂದಿಗೆ ಮೇ 20ರಂದು ‘ದೇಶವ್ಯಾಪಿ ಪ್ರತಿಭಟನಾ ದಿನ ’ವನ್ನು ಆಚರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News