ಮಾಸ್ಕ್ ಧರಿಸುವುದು ಕಾರ್ಬನ್ ಡೈಯಾಕ್ಸೈಡ್ ವಿಷತ್ವಕ್ಕೆ ಕಾರಣವಾಗುತ್ತದೆಯೇ ?

Update: 2020-05-15 14:24 GMT

ಕೊರೋನ ವೈರಸ್ ಸೋಂಕನ್ನು ತಡೆಯಲು ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳುವುದು ಅಗತ್ಯವಾಗಿದೆ. ಹೆಚ್ಚಿನವರು ಇದಕ್ಕಾಗಿ ಮಾಸ್ಕ್ ಧರಿಸುತ್ತಾರೆ. ಆದರೆ ಮಾಸ್ಕ್‌ನ ಸುದೀರ್ಘ ಕಾಲದ ಬಳಕೆಯು ಉಸಿರಾಟದ ತೊಂದರೆ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಈ ಬಗ್ಗೆ ಮಾಹಿತಿಗಳು ಇಲ್ಲಿವೆ.

ನೀವು ಮನೆಯಿಂದ ಹೊರಗಿದ್ದಾಗ ಮಾಸ್ಕ್ ಧರಿಸುತ್ತೀರಾ? ಇದು ಇಂದು ಬಹುಶಃ ಆಹಾರ ಮತ್ತು ನೀರಿನ ನಂತರದ ಬಹುಮುಖ್ಯ ವಿಷಯವಾಗಿದೆ ಎನ್ನುವುದು ನಮಗೆಲ್ಲರಿಗೆ ಗೊತ್ತಿರಬೇಕು. ನಾವು ಮಾಸ್ಕ್ ಧರಿಸದಿದ್ದರೆ ಮತ್ತು ಕೊರೋನ ವೈರಸ್ ಸೋಂಕು ಪೀಡಿತರ ಸಂಪರ್ಕದಲ್ಲಿದ್ದಾಗ,ಅವರು ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ತುಂತುರು ಹನಿಗಳು ಗಾಳಿಯಲ್ಲಿ ಪಸರಿಸುತ್ತವೆ ಮತ್ತು ಸೋಂಕು ನಮ್ಮ ಶರೀರವನ್ನು ಪ್ರವೇಶಿಸುತ್ತದೆ. ಆದರೆ ಮಾಸ್ಕ್ ಧರಿಸಿದ ಕೆಲವೇ ಕ್ಷಣಗಳಲ್ಲಿ ಹಲವಾರು ಜನರಿಗೆ ಅಹಿತವೆನ್ನಿಸುತ್ತದೆ ಮತ್ತು ಉಸಿರಾಟವೂ ಕಷ್ಟವೆನಿಸುತ್ತದೆ. ಅಂದರೆ ಮಾಸ್ಕ್ ಧರಿಸುವುದು ಕಾರ್ಬನ್ ಡೈಯಾಕ್ಸೈಡ್ ವಿಷತ್ವವನ್ನುಂಟು ಮಾಡುತ್ತದೆಯೇ? ಇದು ಅರ್ಧ ನಿಜವಾಗಿದೆ. ಮಾಸ್ಕ್ ನಮ್ಮ ಸುರಕ್ಷತೆಗಾಗಿ ಇದೆ ಮತ್ತು ನಾವು ಮನೆಯಿಂದ ಹೊರಗಿದ್ದಾಗ ಅದನ್ನು ಧರಿಸಲೇಬೇಕು. ಆದರೆ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ, ಮಾಸ್ಕ್ ಕುರಿತ ಕೆಲವು ಸಂಗತಿಗಳಿವೆ. ನೀವು ಜನಸಂದಣಿ ಮತ್ತು ಮುಕ್ತ ವಾತಾವರಣಕ್ಕೆ ತೆರೆದುಕೊಂಡಾಗ ಮಾಸ್ಕ್ ಧರಿಸಲೇಬೇಕು ಎನ್ನುವುದು ತುಂಬ ಮುಖ್ಯವಾಗಿದೆ. ಮನೆಯಲ್ಲಿದ್ದಾಗ ಮಾಸ್ಕ್‌ನ್ನು ತೆಗೆಯಬಹುದು. ದೀರ್ಘಕಾಲ ಮಾಸ್ಕ್ ಬಳಕೆಯು ತನ್ನದೇ ಆದ ಕೆಲವು ಕೆಡುಕುಗಳನ್ನು ಹೊಂದಿದೆ,ಹೀಗಾಗಿ ನಾವು ಎಚ್ಚರಿಕೆಯಿಂದಿರುವುದು ಅಗತ್ಯವಾಗುತ್ತದೆ.

ಮಾಸ್ಕ್ ಅಥವಾ ಮುಖಗವುಸು ಕೊರೋನ ವೈರಸ್ ವಿರುದ್ಧ ಪ್ರಮುಖ ರಕ್ಷಣಾ ಸಾಧನವಾಗಿದೆ ಮತ್ತು ಭವಿಷ್ಯದಲ್ಲಿಯೂ ಕೋವಿಡ್-19 ಹಾಗೂ ಮಾಸ್ಕ್ ಜೊತೆ ಬದುಕುವುದನ್ನು ನಾವು ಕಲಿಯಬೇಕಿದೆ. ಆದರೆ ಮಾಸ್ಕ್‌ನ್ನು ದೀರ್ಘಕಾಲ ಬಳಸುವುದು ನಮ್ಮ ಆರೋಗ್ಯಕ್ಕೆ ಅಪಾಯವನ್ನು ಒಡ್ಡಬಹುದು. ಸೀಮಿತ ಅವಧಿಗೆ ಮಾಸ್ಕ್‌ನ ಬಳಕೆ ಅಥವಾ ಆಗಾಗ್ಗೆ ಕೊಂಚ ತಾಜಾ ಗಾಳಿಯನ್ನು ಉಸಿರಾಡಿಸಲು ಅದನ್ನು ಕೆಳಗೆ ಎಳೆದುಕೊಳ್ಳುವುದು ಒಳ್ಳೆಯದು,ಇಲ್ಲದಿದ್ದರೆ ನಮ್ಮ ರಕ್ಷಣೆಗಾಗಿರುವ ಮಾಸ್ಕ್ ಸಮಸ್ಯೆಗಳನ್ನೂ ಉಂಟು ಮಾಡಬಹುದು.

► ನಿಮಗೆ ತಲೆ ಸುತ್ತುವಿಕೆ ಅಥವಾ ನಿಶ್ಶಕ್ತಿಯುಂಟಾಗಬಹುದು

► ಉಸಿರು ತೆಗೆದುಕೊಳ್ಳುವುದು ಕಷ್ಟವಾಗಬಹುದು

► ಹೈಪರ್‌ಕ್ಯಾಪ್ನಿಯಾ ಅಥವಾ ಕಾರ್ಬನ್ ಡೈಯಾಕ್ಸೈಡ್ ವಿಷತ್ವ ಉಂಟಾಗಬಹುದು ಮತ್ತು ತೀವ್ರ ಹದಗೆಟ್ಟ ಪ್ರಕರಣಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು

ಶರೀರದಲ್ಲಿ ಆಮ್ಲಜನಕದ ಕಡಿಮೆ ಸಂಚಾರದಿಂದಾಗಿ ಈ ಸಮಸ್ಯೆಗಳು ಸೃಷ್ಟಿಯಾಗಬಹುದು. ಮಾಸ್ಕ್ ಧರಿಸಿದಾಗ ನಾವು ಸಾಕಷ್ಟು ಆಮ್ಲಜನಕವನ್ನು ಒಳಗೆ ಎಳದುಕೊಳ್ಳುವುದಿಲ್ಲ,ಹೀಗಾಗಿ ಮಾಸ್ಕ್ ನಮ್ಮ ಶರೀರಕ್ಕೆ ಆಮ್ಲಜನಕದ ಪೂರೈಕೆಯ ಮೇಲೆ ಪ್ರಮಾಣವನ್ನುಂಟು ಮಾಡುತ್ತದೆ. ನಮ್ಮ ಶರೀರದ ಜೊತೆಗೆ ಮಿದುಳಿಗೂ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ ಲಭಿಸುವುದಿಲ್ಲ.

ನೆನಪಿಡಬೇಕಾದ ಮುಖ್ಯ ಅಂಶಗಳು

ಮುಖ ಗವುಸು ನಮ್ಮನ್ನು ರಕ್ಷಿಸುವ ಸಾಧನವಾಗಿದೆ,ಆದರೆ ಸಮರ್ಪಕವಾಗಿ ಬಳಸದಿದ್ದರೆ ಅದು ನಮ್ಮ ಪ್ರಾಣವನ್ನು ತೆಗೆಯಲೂಬಹುದು.

ನೀವು ರಸ್ತೆ,ಪಾರ್ಕ್ ಇತ್ಯಾದಿಗಳಂತಹ ತೆರೆದ ಸ್ಥಳಗಳಲ್ಲಿದ್ದಾಗ ಮಾತ್ರ ಮಾಸ್ಕ್ ಧರಿಸಿ. ಅಪರಿಚಿತ ವ್ಯಕ್ತಿಗಳೊಡನೆ ಸ್ಥಳವನ್ನು ಹಂಚಿಕೊಂಡಿದ್ದಾಗ ಅಥವಾ ಜನಸಂದಣಿಯ ಪ್ರದೇಶಗಳಲ್ಲಿದ್ದಾಗ ಮಾಸ್ಕ್ ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿರಲಿ. ಕಾರ್ಯನಿಮಿತ್ತ ಅನ್ಯವ್ಯಕ್ತಿಯ ಸಮೀಪದಲ್ಲಿದ್ದಾಗ,ಮನೆಯಲ್ಲಿ ಶಂಕಿತ ಸೋಂಕಿತ ವ್ಯಕ್ತಿಯಿದ್ದಾಗ ಮಾಸ್ಕ್ ಧರಿಸಿ. ಕುಟುಂಬದ ಯಾವುದೇ ಸದಸ್ಯರಿಗೆ ಸೋಂಕಿನ ಶಂಕೆ ಇಲ್ಲದಿದ್ದಾಗ ಮನೆಯಲ್ಲಿ ಮಾಸ್ಕ್ ಧರಿಸಬೇಕಾಗಿಲ್ಲ.

ಹೊರಗೆ ಸುರಕ್ಷಿತ ಸ್ಥಳದಲ್ಲಿದ್ದಾಗ,ಉದಾಹರಣೆಗೆ ನೀವು ಕಾರಿನಲ್ಲಿದ್ದು ಎಲ್ಲ ಕಿಟಕಿಗಳೂ ಮುಚ್ಚಿದ್ದರೆ ಮಾಸ್ಕ್ ಅನ್ನು ತೆಗೆಯಬಹುದು,ಏಕೆಂದರೆ ಈ ಸ್ಥಿತಿಯಲ್ಲಿ ಮಾಸ್ಕ್ ಧರಿಸಿದರೆ ಉಸಿರುಗಟ್ಟಿದಂತೆ ಆಗಬಹುದು. ನೀವು ಸೆಲ್ಫ್ ಐಸೊಲೇಷನ್ ಅಥವಾ ಸೆಲ್ಫ್ ಕ್ವಾರಂಟೈನ್‌ನಲ್ಲಿದ್ದಾಗ ಮಾಸ್ಕ್ ಬಳಸಬೇಕಾಗಿಲ್ಲ.

ರೋಗಿಗಳನ್ನು ಐಸೊಲೇಷನ್‌ನಲ್ಲಿರಿಸಿದ ಆಸ್ಪತ್ರೆಗಳಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತದೆ. ಸುರಕ್ಷಿತವಾಗಿರಲು ಇವುಗಳನ್ನು ನೀವು ನಿಮ್ಮ ದೈನಂದಿನ ಜೀವನದಲ್ಲಿಯೂ ಅನುಸರಿಸಬಹುದು.

ಪ್ರತಿ ದಿನ ಕನಿಷ್ಠ 30 ನಿಮಿಷ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳಿ. ವಿಟಾಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ವಿಟಾಮಿನ್ ಸಿ ಪೂರಕಗಳನ್ನೂ ಸೇವಿಸಬಹುದು,ಆದರೆ ಇದಕ್ಕೆ ವೈದ್ಯರ ಶಿಫಾರಸು ಮುಖ್ಯವಾಗಿದೆ. ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರನ್ನು ಸೇವಿಸಿ. ತಣ್ಣನೆಯ ಆಹಾರಗಳಿಂದ ದೂರವಿರಿ. ಫ್ರಿಝ್‌ನಲ್ಲಿಯ ಆಹಾರವನ್ನು ಬಿಸಿಮಾಡಿದ ನಂತರವೇ ಸೇವಿಸಿ. ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ಕೊರೋನ ವೈರಸ್‌ನ ಪಿಎಚ್ 5.5ರಿಂದ 8.5ರವರೆಗೆ ಇರುವುದರಿಂದ ವೈರಸ್‌ನ ನಿರ್ಮೂಲನಕ್ಕಾಗಿ ಹೆಚ್ಚು ಕ್ಷಾರೀಯ ಆಹಾರಗಳನ್ನು ಸೇವಿಸುವುದು ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಲಿಂಬೆ, ಕಿತ್ತಳೆ, ಬೆಳ್ಳುಳ್ಳಿ, ಅವೊಕಾಡೊ, ಅನಾನಸ್, ಮಾವು ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

ಕೃಪೆ: onlymyhealth.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News