ಯೆಸ್ ಬ್ಯಾಂಕ್ ಹಗರಣ: ಡಿಎಚ್‌ಎಫ್‌ಎಲ್ ಪ್ರವರ್ತಕರಿಬ್ಬರ ಬಂಧನ

Update: 2020-05-15 18:09 GMT

ಹೊಸದಿಲ್ಲಿ,ಮೇ 15: ಯೆಸ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಶಾಮೀಲಾದ ಆರೋಪಕ್ಕೆ ಸಂಬಂಧಿಸಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್)ಪ್ರವರ್ತಕರಾದ ಕಪಿಲ್ ಹಾಗೂ ಧೀರಜ್ ವಾಧ್ವಾನ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವುದಕ್ಕೆ ವಿಶೇಷ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.

ಯೆಸ್ ಬ್ಯಾಂಕ್‌ನ ಸಹಸಂಸ್ಥಾಪಕ ರಾಣಾ ಕಪೂರ್ ಮತ್ತಿತರ ವಿರುದ್ಧ ನಡೆಸಲಾಗುತ್ತಿರುವ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ವಾಧ್ವಾನ್ ಅವರ ನಂಟು ಇರುವ ಬಗ್ಗೆ ತಾನು ತನಿಖೆ ನಡೆಸುತ್ತಿದ್ದು, ಈ ಸಂಬಂಧ ತನಿಖೆಗಾಗಿ ಅವರನ್ನು ತನ್ನ ವಶಕ್ಕೊಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯವನ್ನು ಕೋರಿತ್ತು.

ವಾಧ್ವಾನ್ ಸಹೋದರರನ್ನು ಕೇಂದ್ರೀಯ ತನಿಖಾ ಸಂಸ್ಥ್ಥೆ (ಸಿಬಿಐ) ಕಳೆದ ವಾರ ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ಬಂಧಿಸಿದ್ದು, ಅವರನ್ನು ತಿಹಾರ್ ಜೈಲಿನಲ್ಲಿರಿಸಲಾಗಿದೆ. ಆದರೆ ಜೈಲುಗಳಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಮಗೆ ಮಧ್ಯಂತರ ಜಾಮೀನು ನೀಡಬೇಕೆಂದು ವಾಧ್ವಾನ್ ಸಹೋದರರು ಸಲ್ಲಿಸಿದ್ದ ಅರ್ಜಿಯನ್ನು ನಾಯಾಲಯ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News