ಕಲ್ಲಿದ್ದಲು ವಲಯದಲ್ಲಿ ಸರಕಾರದ ಏಕಸ್ವಾಮ್ಯ ಅಂತ್ಯ, ವಾಣಿಜ್ಯ ಗಣಿಗಾರಿಕೆಗೆ ಅನುಮತಿ :ನಿರ್ಮಲಾ

Update: 2020-05-16 11:29 GMT

ಹೊಸದಿಲ್ಲಿ, ಮೇ 16: ಕೊರೋನ ವೈರಸ್‌ನಿಂದಾಗಿ ಉಂಟಾಗಿರುವ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್‌ನ 4ನೇ ಕಂತಿನ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ವಿವರ ನೀಡಿದರು. ಈ ವೇಳೆ ಕಲ್ಲಿದ್ದಲು ವಲಯದಲ್ಲಿ ಸರಕಾರದ ಏಕಸ್ವಾಮ್ಯವನ್ನು ತೆಗೆದುಹಾಕಲಾಗುತ್ತಿದೆ ಎಂದು ಮಹತ್ವದ ಘೋಷಣೆ ಮಾಡಿದರು.

ಕಲ್ಲಿದ್ದಲು ಆಮದು ಕಡಿಮೆ ಮಾಡಿ ಭಾರತದಲ್ಲೇ ಕಲ್ಲಿದ್ದಲು ಹೆಚ್ಚು ಉತ್ಪಾದನೆ ಮಾಡಲು ಕ್ರಮಕೈಗೊಳ್ಳಲಾಗುವುದು. ಕಲ್ಲಿದ್ದಲು ವಲಯಕ್ಕೆ 50,000 ಕೋ.ರೂ. ಹೂಡಿಕೆ ಮಾಡಲಾಗುವುದು. ಕಲ್ಲಿದ್ದಲು ಬೆಡ್‌ಗಳನ್ನು ಹರಾಜು ಮಾಡಲಾಗುವುದು. ಕಲ್ಲಿದ್ದಲು ಗಣಿಗಳನ್ನು ಯಾರು ಬೇಕಾದರೂ ಬಿಡ್ ಮಾಡಿ ಪಡೆಯಬಹುದು. ಯಾರು ಮುಂಗಡ ಹಣ ನೀಡುತ್ತಾರೊ ಅವರಿಗೆ ಕಲ್ಲಿದ್ದಲು ಗಣಿ ಹಂಚಲಾಗುತ್ತದೆ. 500 ಖನಿಜ ಗಣಿಗಳನ್ನು ಮುಕ್ತ ಹಾಗೂ ಪಾರದರ್ಶಕ ಹರಾಜಿಗೆ ಕ್ರಮಗೊಳ್ಳಲಾಗುವುದು, ಗಣಿ ಹಂಚಿಕೆಗೆ ಯಾವುದೇ ಷರತ್ತು ಹಾಗೂ ಅರ್ಹತೆ ಇಲ್ಲ, ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯ ಗಣಿಗಾರಿಕೆಗೆ ಅನುಮತಿಸಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.

 ಭಾರತಕ್ಕಾಗಿ ಉತ್ಪಾದನೆ ಹಾಗೂ ರಫ್ತಿಗೆ ಆದ್ಯತೆ, ದೇಶದಲ್ಲಿ 5 ಲಕ್ಷ ಹೆಕ್ಟೇರ್ ಕೈಗಾರಿಕಾ ಭೂಮಿ ಇದೆ. ಕೈಗಾರಿಕಾ ಕ್ಲಸ್ಟರ್‌ಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜಾಗತಿಕ ಸ್ಪರ್ಧೆಗೆ ದೇಶವನ್ನು ಸಜ್ಜುಗೊಳಿಸಲಾಗುವುದು. ದೇಶದಲ್ಲಿ ಪ್ರಸ್ತುತ 3,376 ಕೈಗಾರಿಕಾ ಪಾರ್ಕ್‌ಗಳಿವೆ. ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪೆನಿಗಳು,ಬಾಹ್ಯಾಕಾಶ ಸೇರಿದಂತೆ 8 ವಲಯಗಳ ಸುಧಾರಣೆ, ವಿದೇಶಿ ಹೂಡಿಕೆ ಆಕರ್ಷಿಸಲು ಕ್ರಮ. ಖಾಸಗಿ ವಲಯದಲ್ಲಿ ಸ್ಪರ್ಧಾತ್ಮಕತೆ,ಪಾರದರ್ಶಕತೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News