‘ಗೇಟ್, ನೆಟ್’ ಅಂಕಗಳ ಆಧಾರದಲ್ಲಿ ವಿಜ್ಞಾನಿಗಳ ನೇಮಕಾತಿಗೆ ಡಿಆರ್‌ಡಿಒ ನಿರ್ಧಾರ

Update: 2020-05-17 18:10 GMT

ಹೊಸದಿಲ್ಲಿ, ಮೇ. 17: ಇಂಜಿನಿಯರ್ ಪದವೀಧರರು ಹಾಗೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ವಿಜ್ಞಾನಿಗಳ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ‘ಗೇಟ್ ಮತ್ತು ನೆಟ್’ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕಾತಿ ನಡೆಯಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಘೋಷಿಸಿದೆ.

 ಗ್ರಾಜುವೇಟ್ ಆ್ಯಪ್ಟಿಟ್ಯೂಡ್ ಟೆಸ್ಟ್ ಇಂಜಿನಿಯರಿಂಗ್(ಗೇಟ್) ಮತ್ತು ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್(ನೆಟ್) ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ 167 ಹುದ್ದೆಗಳಿಗೆ ನೇಮಖಾತಿ ನಡೆಯಲಿದೆ. ಮೇ 22ರಿಂದ ಜುಲೈ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂತಿಮ ವರ್ಷದ ಪರೀಕ್ಷೆ ಬರೆದವರು ಅಥವಾ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವವರೂ ಅರ್ಜಿ ಸಲ್ಲಿಸಬಹುದು.

2020ರ ಜೂನ್‌ನಲ್ಲಿ ನಡೆಯುವ ನೆಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅರ್ಜಿಯಲ್ಲಿ ಪ್ರತ್ಯೇಕ ಕಾಲಂ ಒದಗಿಸಲಾಗುವುದು. ಎಸ್‌ಸಿ/ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News