ಕೊರೋನ ಎಫೆಕ್ಟ್ : 6 ಕೋಟಿ ಮಂದಿ ಕಡುಬಡವರಾಗುವ ನಿರೀಕ್ಷೆ

Update: 2020-05-20 05:18 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ವಿಶ್ವಾದ್ಯಂತ ಕೊರೋನ ವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಸುಮಾರು 60 ದಶಲಕ್ಷ ಮಂದಿ ಕಡುಬಡತನಕ್ಕೆ ತಳ್ಳಲ್ಪಡುವ ಸಾಧ್ಯತೆ ಇದೆ. ಬಡತನ ನಿರ್ಮೂಲನೆ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಮಾಡಿದ ಪ್ರಯತ್ನ ಅಳಿಸಿ ಹೋಗಲಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಈ ಜಾಗತಿಕ ನೆರವು ಸಂಸ್ಥೆ ಈಗಾಗಲೇ 100ಕ್ಕೂ ಹೆಚ್ಚು ದೇಶಗಳಿಗೆ ಹಣಕಾಸು ನೆರವು ಘೋಷಿಸಿದ್ದು, ಮುಂದಿನ 15 ತಿಂಗಳಲ್ಲಿ 160 ಶತಕೋಟಿ ಡಾಲರ್ ಮೊತ್ತವನ್ನು ವೆಚ್ಚ ಮಾಡಲು ಬದ್ಧ ಎಂದು ಅಧ್ಯಕ್ಷ ಡೇವಿಡ್ ಪಲ್ಪಾಸ್ ಹೇಳಿದ್ದಾರೆ.

ವಿಶ್ವದ ಜನಸಂಖ್ಯೆಯ ಪೈಕಿ ಶೇಕಡ 70ರಷ್ಟು ಮಂದಿಗೆ ಈ ನೆರವು ಸಿಗಲಿದೆ. ಇದು ಮಹತ್ವದ ಮೈಲುಗಲ್ಲನ್ನು ಪ್ರತಿನಿಧಿಸುತ್ತದೆ ಎಂದು ಕಾನ್ಫರೆನ್ಸ್ ಕರೆ ಮೂಲಕ ಅವರು ಅಭಿಪ್ರಾಯಟ್ಟರು. ಈ ವರ್ಷ ಕೊರೋನ ಪರಿಣಾಮದಿಂದ ವಿಶ್ವದ ಆರ್ಥಿಕತೆ ಶೇಕಡ 5ರಷ್ಟು ಕುಗ್ಗಲಿದೆ. ತೀರಾ ಬಡ ದೇಶಗಳಿಗೆ ಇದರ ಪರಿಣಾಮ ಅತ್ಯಧಿಕ ಎಂದು ವಿಶ್ಲೇಷಿಸಿದರು.

ಸುಮಾರು 60 ದಶಲಕ್ಷ ಮಂದಿ ಕಡುಬಡತನಕ್ಕೆ ತಳ್ಳಲ್ಪಡುತ್ತಾರೆ ಎಂಬ ಭೀತಿ ಇದೆ. ಇದರಿಂದ ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನೆಗೆ ಮಾಡಿದ ಪ್ರಯತ್ನಗಳನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಮಾಲ್ಪಸ್ ಹೇಳಿದ್ದಾರೆ. ಚೀನಾದಲ್ಲಿ 2019ರಲ್ಲಿ ಕಾಣಿಸಿಕೊಂಡ ಈ ವೈರಸ್ ಸೋಂಕು ಇದೀಗ ವಿಶ್ವಾದ್ಯಂತ ಸುಮಾರು 50 ಲಕ್ಷ ಮಂದಿಯನ್ನು ಬಾಧಿಸಿದ್ದು, ಮೂರು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News