ಕೊರೋನ ವಿರುದ್ಧದ ಹೋರಾಟ: ಕೇರಳದ ಸಾಧನೆ ಉಲ್ಲೇಖಿಸಿ ಮಹಾರಾಷ್ಟ್ರ ಸರಕಾರವನ್ನು ಟೀಕಿಸಿದ ಬಿಜೆಪಿ

Update: 2020-05-20 14:57 GMT

ಮುಂಬೈ: ಕೊರೋನವೈರಸ್ ಹರಡುತ್ತಿರುವುದನ್ನು ಪರಿಶೀಲಿಸುವುದರಲ್ಲಿ ‘ವಿಫಲ’ವಾಗಿದೆ ಎಂದು ಮಹಾರಾಷ್ಟ್ರ ಸರಕಾರವನ್ನು ಬಿಜೆಪಿ ಟೀಕಿಸಿದೆ.

ಕೊರೋನ ಪ್ರಕರಣಗಳು 37,136 ಮತ್ತು ಸಾವುಗಳು 1325 ತಲುಪಿದ ನಂತರ ಬಿಜೆಪಿ ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ಟೀಕಿಸಿದೆ.

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್, ಬಡವರು ಮತ್ತು ಕಷ್ಟದಲ್ಲಿರುವವರಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ ಎಂದು ದೂರಿದರು.

“ಮಾರ್ಚ್ 9ರಂದು ಮಹಾರಾಷ್ಟ್ರದಲ್ಲಿ ಮೊದಲ ಕೊರೋನ ವೈರಸ್ ಪ್ರಕರಣ ವರದಿಯಾಗಿತ್ತು. ಇದೀಗ ಆ ಸಂಖ್ಯೆ 40 ಸಾವಿರದ ಹತ್ತಿರದಲ್ಲಿದೆ. ಮಾರ್ಚ್ 9ರಂದು ಕೇರಳದಲ್ಲೂ ಕೊರೋನ ಪ್ರಕರಣ ವರದಿಯಾಗಿದ್ದರೂ 70 ದಿನಗಳ ಕಾಲ ಅಲ್ಲಿನ ಪ್ರಕರಣಗಳ ಸಂಖ್ಯೆ 1,000ಕ್ಕೂ ಕೆಳಗಿತ್ತು ಮತ್ತು ಕೇವಲ 12 ಸಾವುಗಳು ಸಂಭವಿಸಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 1,300 ದಾಟಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News