ಕಚೇರಿಯಲ್ಲಿ ಕಾರ್ಯನಿರ್ವಹಣೆ: ಗರ್ಭಿಣಿಯರು, ಅಂಗವಿಕಲರಿಗೆ ವಿನಾಯಿತಿ ನೀಡಲು ಇಲಾಖೆಗಳಿಗೆ ಸೂಚನೆ

Update: 2020-05-20 16:21 GMT

ಹೊಸದಿಲ್ಲಿ, ಮೇ 20: ಕೊರೋನ ವೈರಸ್ ಸೋಂಕು ಹರಡಿರುವ ಸಮಯದಲ್ಲಿ, ಗರ್ಭಿಣಿ ಮಹಿಳೆಯರು, ಅಂಗವೈಕಲ್ಯ ಹೊಂದಿರುವವರು ಹಾಗೂ ಅನಾರೋಗ್ಯ ಹೊಂದಿರುವ ಸಿಬ್ಬಂದಿಗಳಿಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದರಿಂದ ವಿನಾಯಿತಿ ನೀಡಬೇಕೆಂದು ಕೇಂದ್ರದ ಸಿಬ್ಬಂದಿ ಸಚಿವಾಲಯ ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ.

 ಅನಾರೋಗ್ಯದಿಂದ ಬಳಲುತ್ತಿರುವ ಉದ್ಯೋಗಿಗಳು ವೈದ್ಯರು ಬರೆದುಕೊಟ್ಟಿರುವ ಔಷಧದ ಚೀಟಿಯನ್ನು ಒದಗಿಸಿದರೆ, ಮತ್ತು ಲಾಕ್‌ಡೌನ್ ಘೋಷಣೆಯ ಮುನ್ನವೇ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ ಅಂತವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಪಾಳಿಪಟ್ಟಿಯಿಂದ ವಿನಾಯಿತಿ ನೀಡಬೇಕು. ಇದೇ ರೀತಿ, ಅಂಗವಿಕಲರು, ಗರ್ಭಿಣಿಯರಿಗೂ ಪಾಳಿಪಟ್ಟಿಯಿಂದ ವಿನಾಯಿತಿ ನೀಡಬೇಕು ಎಂದು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಸಿಬ್ಬಂದಿಗಳ ಸರದಿಪಟ್ಟಿ ಸಿದ್ಧಪಡಿಸುವಂತೆ ಸೋಮವಾರ ಸಿಬ್ಬಂದಿ ಸಚಿವಾಲಯ ಎಲ್ಲಾ ಇಲಾಖೆಗಳಿಗೆ ಸೂಚನೆ ರವಾನಿಸಿತ್ತು. ಈ ಪಾಳಿಪಟ್ಟಿಯ ಆಧಾರದಲ್ಲಿ 50% ಸಿಬ್ಬಂದಿಗಳ ಸಹಿತ ಕಾರ್ಯನಿರ್ವಹಿಸಬೇಕೆಂದು ಆದೇಶಿಸಿತ್ತು. ದಿನಬಿಟ್ಟು ದಿನ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಮತ್ತು ಬೆಳಿಗ್ಗೆ 9ರಿಂದ ಸಂಜೆ 5:30, 9:30ರಿಂದ ಸಂಜೆ 6, 10ರಿಂದ ಸಂಜೆ 6:30 - ಹೀಗೆ ಮೂರು ಪಾಳಿಗಳಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News