×
Ad

ಗುಜರಾತ್: ವಲಸೆ ಕಾರ್ಮಿಕ ಆತ್ಮಹತ್ಯೆ

Update: 2020-05-20 22:42 IST

ಅಹ್ಮದಾಬಾದ್, ಮೇ 20: ಗುಜರಾತ್‌ನ ಸೂರತ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವಲಸೆ ಕಾರ್ಮಿಕನೊಬ್ಬ, ಕೆಲಸ ಕಳೆದುಕೊಂಡ ಖಿನ್ನತೆಯಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೂರತ್‌ನ ಭೆಸ್ತಾನ್ ಪ್ರದೇಶದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಸುನಿಲ್ ಆರ್ ಮಹೇಲಿ ಎಂಬಾತ ತನ್ನ ಕೋಣೆಯ ಸೀಲಿಂಗ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಸ್ಸಾಂನ ಕಾರ್ಮಿಕರೊಂದಿಗೆ ವಾಸಿಸುತ್ತಿದ್ದ ಸುನಿಲ್‌ನನ್ನು ಲಾಕ್‌ಡೌನ್‌ನಿಂದಾಗಿ ಕೆಲಸದಿಂದ ತೆಗೆದುಹಾಕಲಾಗಿತ್ತು.

ಇತರ ಕಾರ್ಮಿಕರು ಅಸ್ಸಾಂಗೆ ಮರಳಿದ್ದರೂ ಸುನಿಲ್ ಮನೆಯಲ್ಲೇ ಉಳಿದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣದ ಬಗ್ಗೆ ತನಿಖೆ ನಡೆಸಲಾಗುವುದು. ಆದರೆ ಪ್ರಾಥಮಿಕ ಮಾಹಿತಿಯಂತೆ ಕೆಲಸ ಕಳೆದುಕೊಂಡ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News