ವಿಶ್ವ ಟ್ವೆಂಟಿ-20 ರದ್ದಾದರೆ ಭಾರತದಲ್ಲಿ ಅಕ್ಟೋಬರ್-ನವೆಂಬರ್ ನಲ್ಲಿ ಐಪಿಎಲ್: ಗಾಯಕ್ವಾಡ್

Update: 2020-05-21 04:15 GMT

ಮುಂಬೈ, ಮೇ 20: ವಿಶ್ವ ಟ್ವೆಂಟಿ-20 ರದ್ದಾದರೆ ಅಥವಾ ಮುಂದೂಡಿದರೆ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಐಪಿಎಲ್ ನಡೆಸುವುದಕ್ಕೆ ಅವಕಾಶ ಇದೆ ಎಂದು ಭಾರತದ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅಂಶುಮಾನ್ ಗಾಯಕ್ವಾಡ್ ತಿಳಿಸಿದ್ದಾರೆ.

 ಸಾಂಕ್ರಾಮಿಕ ರೋಗ ಕೋವಿಡ್ -19ಕಾರಣದಿಂದಾಗಿ ಉಂಟಾಗಿರುವ ಅನಿಶ್ಚಿತತೆಯನ್ನು ಎದುರಿಸಲು ಕ್ರಿಕೆಟಿಗರು ತಮ್ಮ ಎಲ್ಲ ಮಾನಸಿಕ ಶಕ್ತಿಯನ್ನು ಒಟ್ಟುಗೂಡಿಸಬೇಕಾಗುತ್ತದೆ ಎಂದು ಭಾರತದ ಮಾಜಿ ಕೋಚ್ ಹೇಳಿದ್ದಾರೆ. ‘‘ಈ ವರ್ಷ ಟ್ವೆಂಟಿ-20 ವಿಶ್ವಕಪ್ ನಡೆಯುವುದು ಅನುಮಾನವಾಗಿದೆ. ವಿಶ್ವಕಪ್ ರದ್ದುಗೊಂಡರೆ ಅಥವಾ ಮುಂದೂಡಲ್ಪಟ್ಟರೆ, ಐಪಿಎಲ್ ಮಾತ್ರ ನಡೆಸಬಹುದು ಆದರೆ ಅದು ಭಾರತದಲ್ಲಿ ಪರಿಸ್ಥಿತಿಗಳು ಏನೆಂಬುದನ್ನು ಅವಲಂಭಿಸಿರುತ್ತದೆ ಎಂದು ಹೇಳಿದರು.

 ಪ್ರಪಂಚದಾದ್ಯಂತ 50 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದ್ದು, 3.25 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಈ ಪ್ರಕರಣವು ಒಂದು ಲಕ್ಷ ದಾಟಿದೆ ಮತ್ತು 3 ಸಾವಿರಕ್ಕೂ ಅಧಿಕ ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

 ಕನಿಷ್ಠ ನಾಲ್ಕು ತಿಂಗಳ ನಂತರ ಕ್ರಿಕೆಟ್ ಪುನರಾರಂಭವಾಗಬಹುದು ಎಂದೂ ಅವರು ಹೇಳಿದರು. ಕ್ರಿಕೆಟ್‌ನ್ನು ಪುನರಾರಂಭಿಸಲು ಇನ್ನೂ ಎರಡು ತಿಂಗಳು ಅಥವಾ ನಾಲ್ಕು ತಿಂಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಭಾರತಕ್ಕಾಗಿ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ ಮಾಜಿ ಆಟಗಾರ ಗಾಯಕ್ವಾಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News