ಶೌಚಾಲಯವನ್ನು ಕಡಿಮೆ ಬಳಸಬೇಕು..: ದೇಶೀಯ ವಿಮಾನ ಪ್ರಯಾಣದ ವೇಳೆ ಪಾಲಿಸಬೇಕಾದ ನಿಯಮಗಳೇನು ?

Update: 2020-05-21 09:25 GMT

ಹೊಸದಿಲ್ಲಿ: ಸೋಮವಾರದಿಂದ ದೇಶೀಯ ವಿಮಾನ ಸೇವೆಗಳು ಭಾಗಶ: ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆಗೊಳಿಸಿದೆ. ವೃದ್ಧರು, ಗರ್ಭಿಣಿಯರು ಮತ್ತು ಆರೋಗ್ಯ ಸಮಸ್ಯೆಯಿರುವವರು ವಿಮಾನಯಾನದಿಂದ ದೂರವಿರಬೇಕೆಂದು ಸೂಚಿಸಿದೆ.

ಸಚಿವಾಲಯ ಬಿಡುಗಡೆಗೊಳಿಸಿದ ಹೊಸ ಮಾರ್ಗಸೂಚಿ ಇಂತಿವೆ.

► ವಿಮಾನ ಹೊರಡುವುದಕ್ಕಿಂತ ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು.

► ಫೇಸ್ ಮಾಸ್ಕ್ ಅಗತ್ಯ.

► ವೆಬ್ ಚೆಕ್-ಇನ್ ಗೆ ಮಾತ್ರ ಅನುಮತಿ, ಬ್ಯಾಗೇಜ್ ಟ್ಯಾಗ್ ಅನ್ನೂ ಆನ್‍ಲೈನ್ ಮುಖಾಂತರ ಪಡೆಯಬೇಕು.

► ತಲಾ ಪ್ರಯಾಣಿಕರಿಗೆ ಒಂದು ಚೆಕ್-ಇನ್ ಬ್ಯಾಗ್‍ಗೆ ಅನುಮತಿ. ಬ್ಯಾಗೇಜ್ ಟ್ಯಾಗ್ ಅನ್ನು  ಆನ್‍ಲೈನ್ ಪ್ರಿಂಟ್ ಮಾಡಿ ಲಗೇಜ್‍ಗೆ ಜೋಡಿಸಬೇಕು.

►ಕಂಟೈನ್ಮೆಂಟ್ ವಲಯದವರಿಗೆ ಪ್ರಯಾಣಕ್ಕೆ ಅನುಮತಿಯಿಲ್ಲ.

► ಪ್ರಯಾಣಿಕರು  ಆರೋಗ್ಯ ಸೇತು ಆ್ಯಪ್ ಬಳಸಬೇಕು ಇಲ್ಲವೇ  ಸಂಪರ್ಕ ಮಾಹಿತಿಯೊಂದಿಗೆ ಸ್ವಯಂ-ಘೋಷಣೆ ಫಾರ್ಮ್ ನೀಡಬೇಕು.

► ಎಲ್ಲಾ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಪಾಡಬೇಕು, ಮಾರ್ಕರ್‍ಗಳನ್ನು ಹಾಗೂ ಚಿಹ್ನೆಗಳನ್ನು ಅನುಸರಿಸಬೇಕು.

ವಿಮಾನ ನಿಲ್ದಾಣದಲ್ಲಿ ಅನುಸರಿಸಬೇಕಾದ ನಿಯಮಗಳು

► ಪ್ರಯಾಣಿಕರು ಮಾಸ್ಕ್ ಧರಿಸಿರಬೇಕು.

► ಥರ್ಮಲ್ ಸ್ಕ್ರೀನಿಂಗ್‍ಗೆ ಒಳಗಾಗಬೇಕು.

► ಬ್ಯಾಗೇಜ್ ಪಡೆದಿರುವ ದೃಢೀಕರಣ ಎಸ್ಸೆಮ್ಮೆಸ್  ಮೂಲಕ ಮಾಡಲಾಗುವುದು.

► ವಿಮಾನ ಹೊರಡುವುದಕ್ಕಿಂತ ಕನಿಷ್ಠ ಒಂದು ಗಂಟೆ ಮೊದಲು ಬ್ಯಾಗೇಜ್ ನೀಡಬೇಕು.

► ಭದ್ರತಾ ಸಿಬ್ಬಂದಿ ಆದಷ್ಟು ಪ್ರಯಾಣಿಕರಿಂದ ದೂರ ನಿಂತಿರಬೇಕು.

► ಆರೋಗ್ಯ ಸೇತು ಸ್ಟೇಟಸ್ ಅನ್ನು ಸಿಬ್ಬಂದಿಗೆ ತೋರಿಸಬೇಕು. ಈ ಆ್ಯಪ್ ಡೌನ್‍ಲೋಡ್ ಮಾಡದೇ ಇದ್ದವರು ವಿಮಾನ ನಿಲ್ದಾಣದಲ್ಲಿ ಅದನ್ನು ಡೌನ್‍ಲೋಡ್ ಮಾಡಬೇಕು. 14 ವರ್ಷಗಳ ಕೆಳಗಿನ ಮಕ್ಕಳಿಗೆ ಈ ನಿಯಮ ಕಡ್ಡಾಯವಲ್ಲ.

►’ನಾಟ್ ಫಾರ್ ಯೂಸ್' ಕುರ್ಚಿಗಳಲ್ಲಿ ಕುಳಿತುಕೊಳ್ಳಬಾರದು.

► ಪ್ರಯಾಣಿಕರು ಸುರಕ್ಷತಾ ಕಿಟ್, ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ ಅನ್ನು ಬೋರ್ಡಿಂಗ್ ಗೇಟ್ ಸಮೀಪ ಪಡೆಯಬೇಕು.

► ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅನ್ನು ಗೇಟ್ ಸಮೀಪ ಸ್ಕ್ಯಾನ್ ಮಾಡಬೇಕು, ಅಲ್ಲಿನ ಸಿಬ್ಬಂದಿಗೆ ಐಡಿ ಕಾರ್ಡ್ ತೋರಿಸಬೇಕು.

ವಿಮಾನದಲ್ಲಿ ಪಾಲಿಸಬೇಕಾದ ನಿಯಮಗಳು

► ಪ್ರಯಾಣಿಕರು ಅನುಕ್ರಮವಾಗಿ ವಿಮಾನ ಹತ್ತಬೇಕು.

► ವಿಮಾನದ ಶೌಚಾಲಯವನ್ನು ಆದಷ್ಟು ಕಡಿಮೆ ಬಳಸಬೇಕು.

► ಶೌಚಾಲಯದ ಹೊರಗೆ ಸರತಿ ನಿಲ್ಲುವಂತಿಲ್ಲ. ಮಕ್ಕಳು, ಹಿರಿಯರ ಜತೆ ಒಬ್ಬರು ಮಾತ್ರ ನಿಲ್ಲಬಹುದು.

► ಊಟ ನೀಡಲಾಗುವುದು, ಪ್ರಯಾಣಿಕರು ತಮ್ಮದೇ ಆಹಾರ ತರುವಂತಿಲ್ಲ, ಪ್ರತಿ ಸೀಟಿನಲ್ಲಿ ನೀರಿನ ಬಾಟಲಿ ಇಡಲಾಗುತ್ತದೆ.

► ವಿಮಾನದೊಳಗಡೆ ದಿನಪತ್ರಿಕೆ/ಮ್ಯಾಗಜೀನುಗಳಿಗೆ ಅನುಮತಿಯಿಲ್ಲ.

► ವಿಮಾನದಿಂದ ಇಳಿದ ನಂತರ ಸುರಕ್ಷಿತ ಅಂತರ ಕಾಪಾಡಿಕೊಂಡು ಬ್ಯಾಗೇಜ್‍ಗಾಗಿ ಕಾಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News