‘ನ್ಯಾಯ್’ ಯೋಜನೆ ಜಾರಿಗೊಳಿಸಿದ ಛತ್ತೀಸ್ ಗಢ ಕಾಂಗ್ರೆಸ್ ಸರಕಾರ: ರೈತರ ತಲಾ ಎಕರೆಗೆ 10 ಸಾವಿರ ರೂ. ಸಹಾಯಧನ

Update: 2020-05-21 18:24 GMT

ರಾಯ್ಪುರ: ರೈತರ ತಲಾ ಎಕರೆ ಭೂಮಿಗೆ 10 ಸಾವಿರ ರೂ. ಬ್ಯಾಂಕ್ ಖಾತೆಗೆ ವರ್ಗಾಯಿಸಲಿರುವ ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆಯನ್ನು ಛತ್ತೀಸ್ ಗಢ ಕಾಂಗ್ರೆಸ್ ಸರಕಾರ ಗುರುವಾರ ಜಾರಿಗೊಳಿಸಿದೆ.

ನೇರ ಲಾಭ ವರ್ಗಾವಣೆ ಮೂಲಕ ಮೊದಲ ಕಂತಾಗಿ ಸರಕಾರವು 19 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 1500 ಕೋಟಿ ರೂ.ಗಳನ್ನು ವರ್ಗಾಯಿಸಿದೆ.

ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ರ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕವೇ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದ ಲಾಭವನ್ನು ಶೇ.90ರಷ್ಟು ಸಣ್ಣ ರೈತರು ಪಡೆಯಲಿದ್ದಾರೆ. ಇದರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಮತ್ತು ಹಿಂದುಳಿದ ವರ್ಗದವರು ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News