‘ನಮ್ಮ ಎಂಜಿನ್ ಗಳು ವಿಫಲಗೊಂಡಿವೆ’: ಪತನಗೊಂಡ ವಿಮಾನದ ಪೈಲಟ್ ನ ಕೊನೆಯ ಮಾತುಗಳು…

Update: 2020-05-22 16:23 GMT

ಹೊಸದಿಲ್ಲಿ: ಇಂದು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವುದಕ್ಕೆ ಕೆಲ ನಿಮಿಷಗಳ ಮೊದಲು ಪತನಗೊಂಡ ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ವಿಮಾನದ ಅಧಿಕಾರಿಗಳೊಂದಿಗೆ ಕೊನೆಯ ಕ್ಷಣದಲ್ಲಿ ಪೈಲಟ್ ನಡೆಸಿದೆ ಸಂಭಾಷಣೆ ಬಹಿರಂಗಗೊಂಡಿದೆ.

ವಿಮಾನದ ಇಂಜಿನ್ ಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳುವ ಪೈಲಟ್ ತುರ್ತು ಸಂದರ್ಭದ ಕರೆ ನೀಡುತ್ತಾರೆ.

ಪೈಲಟ್ ಗೆ ಸಲಹೆಗಳನ್ನು ನೀಡಲು ಏರ್ ಟ್ರಾಫಿಕ್ ಕಂಟ್ರೋಲರ್ ಯತ್ನಿಸುತ್ತಾರೆ. ಆದರೆ ಅದಾಗಲೇ ವಿಮಾನ ಪತನಗೊಳ್ಳುತ್ತದೆ.

ಆ ಸಂಭಾಷಣೆ ಈ ರೀತಿ ಇದೆ

ಪೈಲಟ್: ಪಿಕೆ8303 ಅಪ್ರೋಚ್

ಎಟಿಸಿ: ಹೇಳಿ ಸರ್

ಪೈಲಟ್: ನಾವು ಎಡಕ್ಕೆ ತಿರುಗಬೇಕೇ?

ಎಟಿಸಿ: ದೃಢವಾಗಿದೆ

ಪೈಲಟ್: ನಾವು ನೇರವಾಗಿ ಬರುತ್ತಿದ್ದೇವೆ. ನಾವು ಎರಡೂ ಎಂಜಿನ್ ಗಳನ್ನು ಕಳೆದುಕೊಂಡಿದ್ದೇವೆ

ಎಟಿಸಿ: ನೀವು ಬೆಲ್ಲಿ ಲ್ಯಾಂಡಿಂಗ್ ಮಾಡುತ್ತಿದ್ದೀರಾ?

ಪೈಲಟ್ ಮಾತನಾಡುವುದು ಕೇಳಿಸುವುದಿಲ್ಲ

ಎಟಿಸಿ: ಲ್ಯಾಂಡ್ ಆಗಲು ರನ್ ವೇ ಲಭ್ಯವಿದೆ

ಪೈಲಟ್: ರೋಜರ್

ಪೈಲಟ್ : ಮೇಡೇ, ಮೇಡೇ, ಮೇಡೇ, ಪಾಕಿಸ್ತಾನ್ 8303

ನಂತರ ಆಡಿಯೋ ಕಡಿತಗೊಳ್ಳುತ್ತದೆ.

ಇದಾಗಿ ಕೆಲ ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ. ಮೇಡೇ ಎನ್ನುವುದು ಆಡಿಯೋ ಕರೆಗಳ ಮೂಲಕ ತುರ್ತು ಸಂದರ್ಭಗಳಲ್ಲಿ, ಅಪಾಯದ ಸಂದರ್ಭಗಳಲ್ಲಿ ಸಹಾಯಕ್ಕಾಗಿ ನೀಡುವ ಕರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News