ಇಸ್ರೋದ ‘ಗಗನಯಾನ’: ನಾಲ್ವರು ಭಾರತೀಯ ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ಪುನರಾರಂಭ

Update: 2020-05-23 17:01 GMT

ಬೆಂಗಳೂರು, ಮೇ 23: ಭಾರತದ ಪ್ರಪ್ರಥಮ ಮಾನವಸಹಿತ ಅಂತರಿಕ್ಷ ಅಭಿಯಾನ ‘ಗಗನಯಾನ ’ಕ್ಕಾಗಿ ಆಯ್ಕೆ ಮಾಡಲಾಗಿರುವ ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ರಷ್ಯಾದಲ್ಲಿ ಪುನರಾರಂಭಗೊಂಡಿದೆ. 2020, ಫೆ.20ರಿಂದ ಈ ಗಗನಯಾತ್ರಿಗಳಿಗೆ ತರಬೇತಿ ಆರಂಭವಾಗಿತ್ತಾದರೂ ಕೋವಿಡ್-19 ಭೀತಿಯಿಂದಾಗಿ ಅದನ್ನು ಸ್ಥಗಿತಗೊಳಿಸಲಾಗಿತ್ತು.

 ರಷ್ಯಾದ ಸರಕಾರಿ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ರಾಸ್‌ಕಾಸ್ಮಾಸ್‌ನ ಅಂಗವಾಗಿರುವ ಗ್ಲಾವ್‌ಕಾಸ್ಮಾಸ್,ಜೆಎಸ್‌ಸಿ ಮತ್ತು ಭಾರತದ ಇಸ್ರೋದ ಹ್ಯೂಮನ್ ಸ್ಪೇಸ್‌ಫ್ಲೈಟ್ ಸೆಂಟರ್ ನಡುವೆ ಒಪ್ಪಂದದಡಿ ಭಾರತೀಯ ವಾಯುಪಡೆಯ ನಾಲ್ವು ಯುದ್ಧವಿಮಾನ ಪೈಲಟ್‌ಗಳು ಗಗಾರಿನ್ ರೀಸರ್ಚ್ ಆ್ಯಂಡ್ ಟೆಸ್ಟ್ ಕಾಸ್ಮೊನಾಟ್ ಟ್ರೇನಿಂಗ್ ಸೆಂಟರ್‌ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದು,

ಗಗನಯಾನ ಯೋಜನೆಗೆ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. 2019, ಜೂ.27ರಂದು ಈ ಒಪ್ಪಂದವಾಗಿತ್ತು.

ಎಲ್ಲ ನಾಲ್ವರು ಗಗನಯಾತ್ರಿಗಳು ಉತ್ತಮ ಆರೋಗ್ಯದಿಂದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ರಾಸ್‌ಕಾಸ್ಮಾಸ್ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ 75ನೇ ಸ್ವಾತಂತ್ರೋತ್ಸವ ವರ್ಷವಾದ 2022ರಲ್ಲಿ 10,000 ಕೋ.ರೂ.ವೆಚ್ಚದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News