ಮಹಾರಾಷ್ಟ್ರದಲ್ಲಿ 50,000 ಗಡಿ ದಾಟಿದ ಕೋವಿಡ್-19 ಸೋಂಕಿತ ಪ್ರಕರಣ

Update: 2020-05-24 18:07 GMT

ಮುಂಬೈ, ಮೇ 24: ದೇಶದಲ್ಲಿ ಅತ್ಯಂತ ಹೆಚ್ಚು ಕೋವಿಡ್-19 ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ರವಿವಾರ ಒಂದೇ ದಿನ ಗರಿಷ್ಟ 3,041 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ರಾಜ್ಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದೆ ಎಂದು ಸರಕಾರದ ಅಂಕಿ ಅಂಶ ತಿಳಿಸಿದೆ.

ಮುಂಬೈನಲ್ಲಿ 24 ಗಂಟೆಗಳ ಅವಧಿಯಲ್ಲಿ 1,725 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ನಗರದಲ್ಲಿ ಒಟ್ಟು 30,452 ಪ್ರಕರಣ ದಾಖಲಾಗಿದೆ. ಇದರಲ್ಲಿ 988 ಜನರು ಸಾವನ್ನಪ್ಪಿದ್ದಾರೆ. ರವಿವಾರ 58 ಜನರು ಕೊರೋನಕ್ಕೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು 1,635 ಮಂದಿ ಕೊರೋನ ಆರ್ಭಟಕ್ಕೆ ಜೀವ ಬಿಟ್ಟಿದ್ದಾರೆ.

 ರಾಜ್ಯದಲ್ಲಿ ರವಿವಾರ ಒಂದೇ ದಿನ ಕೋವಿಡ್-19ಗೆ ಸಂಬಂಧಿಸಿ 58 ಸಾವುಗಳು ಸಂಭವಿಸಿವೆ. ಈ ಪೈಕಿ 39 ಮಂದಿ ಮುಂಬೈನಿವಾಸಿಗರಾಗಿದ್ದಾರೆ. ಪುಣೆ ಹಾಗೂ ಸೋಲಾಪುರದಲ್ಲಿ ತಲಾ 6, ಲಾತೂರ್, ಮೀರಾ-ಬಾಯಂದರ್ ಹಾಗೂ ಥಾಣೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 ಸತತ 8ನೇ ಬಾರಿ ದಿನವೊಂದಕ್ಕೆ 2,000ಕ್ಕೂ ಅಧಿಕ ಹೊಸ ಪಾಸಿಟಿವ್ ಕೇಸ್‌ಗಳು ರಾಜ್ಯದಲ್ಲಿ ವರದಿಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News