ಭಾರತಕ್ಕೆ ರಫೇಲ್ ಪೂರೈಕೆಯಲ್ಲಿ ವಿಳಂಬ ಇಲ್ಲ: ಫ್ರಾನ್ಸ್ ಸ್ಪಷ್ಟನೆ

Update: 2020-05-25 04:43 GMT

ಹೊಸದಿಲ್ಲಿ: ಸುಮಾರು 58 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತಕ್ಕೆ 36 ರಫೇಲ್ ಯುದ್ಧವಿಮಾನಗಳನ್ನು ಪೂರೈಸುವಲ್ಲಿ ಯಾವುದೇ ವಿಳಂಬ ಆಗದು ಎಂದು ಫ್ರಾನ್ಸ್ ಸ್ಪಷ್ಟಪಡಿಸಿದೆ. ಪೂರೈಕೆಯ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯೆಲ್ ಲೆನಿನ್ ಹೇಳಿದ್ದಾರೆ.

ಯುದ್ಧವಿಮಾನ ಪೂರೈಕೆಗಾಗಿ ಭಾರತ 2016ರ ಸೆಪ್ಟೆಂಬರ್ ನಲ್ಲಿ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡಿತ್ತು.

“ಯುದ್ಧ ವಿಮಾನಗಳ ಪೂರೈಕೆಯಲ್ಲಿ ಒಪ್ಪಂದದ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಏಪ್ರಿಲ್ ಕೊನೆಗೆ ಮೊದಲ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.

'ಅಕ್ಟೋಬರ್ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಹೊಸ ವಿಮಾನವನ್ನು ಫ್ರಾನ್ಸ್ ನ ವಾಯುನೆಲೆಯಲ್ಲಿ ಅಕ್ಟೋಬರ್ 8ರಂದು ಸ್ವೀಕರಿಸಿದ್ದರು. ನಾಲ್ಕು ವಿಮಾನಗಳನ್ನು ಸಾಧ್ಯವಾದಷ್ಟು ಬೇಗ ಪೂರೈಸಲಾಗುತ್ತದೆ. ಪೂರೈಕೆಯ ವೇಳಾಪಟ್ಟಿಯನ್ನು ಅನುಸರಿಸುವುದಿಲ್ಲ ಎಂಬ ಅನುಮಾನ ಬೇಡ” ಎಂದು ಸ್ಪಷ್ಟಪಡಿಸಿದರು.

ಫ್ರಾನ್ಸ್ ಕೊರೋನ ವೈರಸ್ ಸಾಂಕ್ರಾಮಿಕದಿಂದ ತಲ್ಲಣಿಸಿದ್ದು, ದೇಶದಲ್ಲಿ 1.45 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 28,330 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಫೇಲ್ ವಿಮಾನ ಸರಬರಾಜು ವಿಳಂಬವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News