ಎರಡು ತಿಂಗಳ ಬಳಿಕ ದೇಶಾದ್ಯಂತ ದೇಶಿಯ ವಿಮಾನ ಹಾರಾಟ ಆರಂಭ

Update: 2020-05-25 06:40 GMT

ಮುಂಬೈ,ಮೇ 25:ಎರಡು ತಿಂಗಳ ಬಳಿಕ ಸೋಮವಾರ ಬೆಳಗ್ಗೆ ದೇಶಾದ್ಯಂತ ದೇಶಿಯ ವಿಮಾನ ಯಾನ ಪುನರಾರಂಭವಾಗಿದೆ.ಮುಂಬೈ ಏರ್‌ಪೋರ್ಟ್‌ನಲ್ಲಿ ಕೆಲವು ಗೊಂದಲ ಉಂಟಾಗಿದ್ದು, ತಮ್ಮ ವಿಮಾನಗಳು ರದ್ದಾಗಿವೆ ಎಂದು ಹೆಚ್ಚಿನ ಪ್ರಯಾಣಿಕರು ದೂರಿದ್ದಾರೆ. ತಮಗೆ ಈ ಕುರಿತು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.

ಮುಂಬೈ-ಪಾಟ್ನಾ ವಿಮಾನವು ಬೆಳಗ್ಗೆ 6:45ಕ್ಕೆ ಛತ್ರಪತಿ ಶಿವಾಜಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಿಂದ ಟೇಕ್‌ಆಫ್ ಆದ ಮೊದಲ ವಿಮಾನವಾಗಿದೆ. ಮುಂಬೈ ವಿಮಾನ ನಿಲ್ದಾಣ ದೇಶದ ಎರಡನೇ ಅತ್ಯಂತ ನಿಬಿಡ ಏರ್‌ಪೋರ್ಟ್ ಆಗಿದೆ. ಪ್ರತಿದಿನ 50 ವಿಮಾನಗಳು ಸಂಚರಿಸುತ್ತವೆ.

"ನಾವೆಲ್ಲರೂ ದಿಲ್ಲಿಗೆ ಹೊರಟಿದ್ದೆವು. ನಾವು ಇಲ್ಲಿಗೆ ಬಂದ ಮೇಲೆ ವಿಮಾನ ರದ್ದಾಗಿರುವುದು ಗೊತ್ತಾಯಿತು. ಓರ್ವ ಕಸ್ಟಮರ್ ಕೇರ್ ಉದ್ಯೋಗಿಯು ಇಂದು ರಾತ್ರಿ ವಿಮಾನ ಮರು ನಿಗದಿಯಾಗಬಹುದು ಎಂದು ಹೇಳಿದ್ದಾರೆ. ಆದರೆ ಅದು ಇನ್ನೂ ಖಚಿತವಾಗಿಲ್ಲ'' ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

ಏರ್‌ಪೋರ್ಟ್ ಪ್ರವೇಶದ್ವಾರದಲ್ಲಿ ಎಂದಿಗಿಂತ ಹೆಚ್ಚು ಪ್ರಯಾಣಿಕರು ಜಮಾಯಿಸಿದ್ದು,ಭದ್ರತಾ ಸಿಬ್ಬಂದಿ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸುತ್ತಿದ್ದಾರೆ. ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡುವಂತೆ ಪ್ರತಿಯೊಬ್ಬ ಪ್ರಯಾಣಿಕರಿಗೆ ಸೂಚಿಸಲಾಗಿದೆ. ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ಧಾಣದ ಪ್ರವೇಶದ್ವಾರದಲ್ಲಿ ಉದ್ದನೆಯ ಸರದಿ ಸಾಲು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News