ಸುರಕ್ಷಿತ ಅಂತರ ನಿಯಮ, ಲಾಕ್ ಡೌನ್ ಉಲ್ಲಂಘಿಸಿ ಮೈದಾನದಲ್ಲಿ ಕ್ರಿಕೆಟ್ ಆಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

Update: 2020-05-25 09:46 GMT

ಸೋನಿಪತ್ :  ಲಾಕ್ ಡೌನ್  ಜಾರಿಯಲ್ಲಿರುವ ಸಂದರ್ಭ ಸುರಕ್ಷಿತ ಅಂತರ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಹರ್ಯಾಣದ ಸೋನಿಪತ್‍ನ ಗನ್ನೌರ್ ಎಂಬಲ್ಲಿರುವ ಶೇಖ್‍ಪುರ ಯನೀಖ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ಕ್ರಿಕೆಟ್ ಆಡಿದ್ದಾರೆ.

ಸೋನಿಪತ್‍ ಗೆ ಯಾರನ್ನೋ ಭೇಟಿಯಾಗಲು ಬಂದಿದ್ದ ಮನೋಜ್ ತಿವಾರಿ ಅಲ್ಲಿನ ಗನ್ನೌರ್  ಎಂಬಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದೆ ಎಂದು ತಿಳಿದು ಅಲ್ಲಿಗೆ ಬಂದು ಆಟವಾಡಲು ಮೈದಾನಕ್ಕಿಳಿದಿದ್ದರು.

ಲಾಕ್ ಡೌನ್ ಹಾಗೂ ಸುರಕ್ಷಿತ ಅಂತರ ನಿಯಮಗಳನ್ನು ಪಾಲಿಸಲಾಗಿದೆ ಎಂದು ಹೇಳಲಾಗಿದೆಯಾದರೂ ಆ ಸಂದರ್ಭದ ಕೆಲ ಚಿತ್ರಗಳಲ್ಲಿ ತಿವಾರಿ ಅವರು ಸುರಕ್ಷಿತ ಅಂತರ ಪಾಲಿಸಿಲ್ಲ ಎಂಬುದು ತಿಳಿದು ಬರುತ್ತದೆ.

“ಅದೊಂದು ಖಾಸಗಿ ಕಾರ್ಯಕ್ರಮವಾಗಿತ್ತು. ಪೊಲೀಸ್ ಅನುಮತಿಯೊಂದಿಗೆ ಅಲ್ಲಿಗೆ ತೆರಳಿದ್ದೆ. ನನಗೆ ತಿಳಿದಿರುವವರೊಬ್ಬರು ಇಲ್ಲಿ ಅಕಾಡಮಿ ಸ್ಥಾಪಿಸಿದ್ದರು ಹಾಗೂ ಅಲ್ಲಿ ನಡೆಯುತ್ತಿದ್ದ ಸೌಹಾರ್ದ ಪಂದ್ಯ ವೀಕ್ಷಿಸಲು ಆಹ್ವಾನಿಸಿದ್ದರು. ಹರ್ಯಾಣ ಸರಕಾರ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ಈ ಕಾರ್ಯಕ್ರಮ ಕುರಿತು ತಿಳಿದಿತ್ತು. ಅಲ್ಲಿ 25-30 ಜನರಷ್ಟೇ ಇದ್ದರು'' ಎಂದು ತಿವಾರಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News