‘ಮತ್ತೆ ಮತ್ತೆ ಅದನ್ನೇ ಚರ್ಚಿಸಲು ನೋವಾಗುತ್ತದೆ’

Update: 2020-05-25 10:19 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಹರಡಲು ಅದರ ತಬ್ಲೀಗಿ ಜಮಾತ್ ಸದಸ್ಯರು ಕಾರಣರಾಗಿದ್ದಾರೆಂಬ ಆರೋಪದ ಕುರಿತು ಮತ್ತೆ ಮತ್ತೆ ಚರ್ಚಿಸಲು ತಮಗೆ ನೋವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಹೇಳಿದ್ದಾರೆ.

ತಮ್ಮ ಪಕ್ಷದ ಸಹೋದ್ಯೊಗಿ ಹಾಗೂ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್ ಅವರನ್ನುದ್ದೇಶಿಸಿ ಮಾತನಾಡಿದ ಹರ್ಷವರ್ಧನ್,  “ನಿಜವೇನೆಂದರೆ ಈ ವಿಚಾರ ಈಗ ಹಳೆಯದಾಗಿದೆ ಹಾಗೂ ಸಾಕಷ್ಟು ಚರ್ಚೆ ಹಾಗೂ ವಿಮರ್ಶೆಗೊಳಗಾಗಿದೆ. ಅದೇ ವಿಚಾರ ಮತ್ತೆ ಮತ್ತೆ ಮಾತನಾಡಲು ನನಗೆ ನೋವುಂಟಾಗುತ್ತಿದೆ'' ಎಂದು ಸಚಿವರು ಹೇಳಿದರು.

“ಭಾರತದಲ್ಲಿ ಕೊರೋನವೈರಸ್‍ಗೆ ದಿಲ್ಲಿಯ ತಬ್ಲೀಗಿ ಜಮಾತ್ ಕಾರ್ಯಕ್ರಮ ಟೇಕ್-ಆಫ್ ಆಗಿತ್ತೇ?'' ಎಂದು ರಾವ್ ಪ್ರಶ್ನಿಸಿದ್ದರು.

“ಸರಕಾರ ಸೂಚಿಸಿದ  ಮಾರ್ಗಸೂಚಿಗಳನ್ನು ಎಲ್ಲಾ ಸಮುದಾಯದವರೂ ಅನುಸರಿಸಬೇಕೆಂಬುದಕ್ಕೆ ತಬ್ಲೀಗಿ ಜಮಾತ್ ಪ್ರಕರಣ ಎಲ್ಲರಿಗೂ ಪಾಠವಾಗಿದೆ. ಅದರಲ್ಲಿ ಭಾಗವಹಿಸಿದ್ದ ಹೆಚ್ಚಿನವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿರುವುದರಿಂದ ಅದನ್ನೇ ಮತ್ತೆ ಚರ್ಚಿಸುವ ಅಗತ್ಯವಿಲ್ಲ'' ಎಂದ ಸಚಿವರು 28 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ ಆಂಧ್ರ ಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರದ ತಬ್ಲೀಗಿ ಸದಸ್ಯರನ್ನು ತಾವು ಇತ್ತೀಚೆಗೆ ಬೀಳ್ಕೊಟ್ಟಿದ್ದಾಗಿಯೂ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News