×
Ad

ದಿಲ್ಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದ 5 ವರ್ಷದ ಬಾಲಕ!

Update: 2020-05-25 17:57 IST

ಹೊಸದಿಲ್ಲಿ: ಲಾಕ್ ಡೌನ್‍ನಿಂದಾಗಿ ಎರಡು ತಿಂಗಳು ಸ್ಥಗಿತಗೊಂಡಿದ್ದ ದೇಶೀಯ ವಿಮಾನ ಸಂಚಾರ ಇಂದು ಆರಂಭಗೊಂಡಾಗ ಇಂದು  ಬೆಂಗಳೂರು ವಿಮಾನ ನಿಲ್ದಾಣಕ್ಕೆ ದಿಲ್ಲಿಯಿಂದ ಆಗಮಿಸಿದ ವಿಮಾನದಿಂದ ಇಳಿದ ಒಬ್ಬ ಪುಟ್ಟ ಬಾಲಕ ತನ್ನ ಕೈಯ್ಯಲ್ಲಿ ‘ಸ್ಪೆಶಲ್ ಕೆಟಗರಿ' ಟಿಕೆಟ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾನೆ.

ಐದು ವರ್ಷದ ವಿಹಾನ್ ಶರ್ಮ ದಿಲ್ಲಿಯಿಂದ ಒಬ್ಬಂಟಿಯಾಗಿ ಪ್ರಯಾಣಿಸಿದ್ದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುತ್ತಲೇ ಅಲ್ಲಿ ತನಗಾಗಿ ಕಾತರದಿಂದ ಕಾದಿದ್ದ ತಾಯಿಯನ್ನು ಕಾಣುತ್ತಲೇ ಆಕೆಯ ಬಳಿ ಧಾವಿಸಿದ್ದ.

“ನನ್ನ ಐದು ವರ್ಷದ ಪುತ್ರ ವಿಹಾನ್ ದಿಲ್ಲಿಯಿಂದ ಒಬ್ಬನೇ ಪ್ರಯಾಣಿಸಿದ್ದ. ಮೂರು ತಿಂಗಳುಗಳ ನಂತರ ಬೆಂಗಳೂರಿಗೆ ವಾಪಸಾಗಿದ್ದಾನೆ'' ಎಂದು  ಹಳದಿ ಬಣ್ಣದ ಅಂಗಿ ಹಾಗೂ ಅದೇ ಬಣ್ಣದ ಮಾಸ್ಕ್ ಹಾಗೂ ಗ್ಲವ್ಸ್ ಧರಿಸಿದ್ದ ಪುತ್ರನನ್ನು ಎತ್ತಿಕೊಂಡು ಆತನ ತಾಯಿ ಹೇಳಿದರು. ಬಾಲಕನ ಫೋಟೊ ಇದೀಗ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News