ಹಿಮಾಚಲ ಪ್ರದೇಶ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊರೋನದಿಂದ ಮೃತ್ಯು

Update: 2020-05-26 09:45 GMT

ಚೆನ್ನೈ: ಕಳೆದ ಶನಿವಾರ ಮೃತಪಟ್ಟಿದ್ದ ಹಿಮಾಚಲ ಪ್ರದೇಶ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ, ಚೆನ್ನೈನ ಮೈಲಾಪೂರ್ ನಿವಾಸಿ, 87 ವರ್ಷದ ಜಸ್ಟಿಸ್  ವಿಶ್ವನಾಥನ್ ರತ್ನಂ ಅವರಿಗೆ ಕೋವಿಡ್-19 ಸೋಂಕು ಇತ್ತೆಂಬುದು ಇದೀಗ ದೃಢಪಟ್ಟಿದೆ.

ಜಸ್ಟಿಸ್ ವಿಶ್ವನಾಥನ್ ಅವರು ಹಿಮಾಚಲ ಪ್ರದೇಶದ ಹಂಗಾಮಿ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. 1984ರಲ್ಲಿ ನಿವೃತ್ತಿ ನಂತರ ಅವರು ಚೆನ್ನೈಯಲ್ಲಿ ವಾಸಿಸುತ್ತಿದ್ದರು. ಅವರು ಪತ್ನಿ, ಪುತ್ರಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಜಸ್ಟಿಸ್ ವಿಶ್ವನಾಥನ್ ಅವರು ಮದ್ರಾಸ್ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ  1992ರಲ್ಲಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುಂಚೆ ಅವರು ತಮಿಳುನಾಡು ಕಾನೂನು ಸೇವಾ ಮಂಡಳಿಯ ಕಾರ್ಯಕಾರಿ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News