‘ರಿಪಬ್ಲಿಕ್ ಟಿವಿ’ ಪ್ರಾಯೋಜಕರ ಪಟ್ಟಿಯಿಂದ ಹಿಂದೆ ಸರಿದ ಕಾರು ತಯಾರಿಕಾ ಸಂಸ್ಥೆ ‘ರೆನೊ’?

Update: 2020-05-26 12:01 GMT

ಹೊಸದಿಲ್ಲಿ: ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಸಮಸ್ಯೆಗಳು ಸದ್ಯ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ತಮ್ಮ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತಂತೆ ನೀಡಿದ ಹೇಳಿಕೆಗಳಿಗೆ ಈಗಾಗಲೇ ಹಲವು ಎಫ್‍ಐಆರ್ ಎದುರಿಸುತ್ತಿದ್ದಾರೆ ಅರ್ನಬ್. ಇದು ಸಾಲದೆಂಬಂತೆ ರಿಪಬ್ಲಿಕ್ ವಾಹಿನಿಯ ಪ್ರವರ್ತಕರ ಪಟ್ಟಿಯಿಂದ  ಫ್ರೆಂಚ್ ಕಾರು ತಯಾರಿಕಾ ಸಂಸ್ಥೆ ರೆನೊ ಕಾಣೆಯಾಗಿದೆ ಎಂದು mediascanner.in ವರದಿ ಮಾಡಿದೆ.

ರೆನೊ ಸಂಸ್ಥೆ ಬಹಿರಂಗವಾಗಿ ರಿಪಬ್ಲಿಕ್ ಟಿವಿ ಜತೆ ಸಂಬಂಧ ಕಡಿದುಕೊಂಡಿಲ್ಲವಾದರೂ ತನ್ನ ಜಾಹೀರಾತುಗಳನ್ನು ಚಾನೆಲ್‍ನಿಂದ ವಾಪಸ್ ಪಡೆದಿದೆ ಎನ್ನಲಾಗಿದೆ.

ಮಹಾರಾಷ್ಟ್ರದ ಪಾಲ್ಘರ್ ಪ್ರಕರಣದಲ್ಲಿ ಅರ್ನಬ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ www.newslaundry.com ರಿಪಬ್ಲಿಕ್ ಟಿವಿಯ ಪ್ರವರ್ತಕ ಕಂಪೆನಿಗಳ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿದ್ದ ರೆನೊ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News