ಪಾಕ್: ಅಸಿಯಾ ಬೀಬಿ ಮೈದುನನ ಹತ್ಯೆ

Update: 2020-05-26 16:49 GMT

ಶೇಖುಪುರ (ಪಾಕಿಸ್ತಾನ), ಮೇ 26: ದೇವನಿಂದನೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿ ಬಳಿಕ ಸುಪ್ರೀಂ ಕೋರ್ಟ್‌ನಿಂದ ದೋಷಮುಕ್ತಿಗೊಂಡಿರುವ ಪಾಕಿಸ್ತಾನದ ಕ್ರೈಸ್ತ ಮಹಿಳೆ ಅಸಿಯಾ ಬೀಬಿ ಎಂಬವರ ಮೈದುನನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತದ ಶೇಖುಪುರ ಎಂಬಲ್ಲಿ ಸೋಮವಾರ ಕತ್ತು ಸೀಳಿ ಕೊಲೆಗೈಯಲಾಗಿದೆ.

ಅಸಿಯಾ ಬೀಬಿಯ ಮೈದುನ ಯೂನುಸ್ ಮೇ 24ರಂದು ತನ್ನ ಗದ್ದೆಗೆ ಹೋಗಿದ್ದರು. ಅವರು ರಾತ್ರಿಯಾದರೂ ಮನೆಗೆ ಮರಳಲಿಲ್ಲ. ಮಾರನೇ ದಿನ ಬೆಳಗ್ಗೆ ಅವರ ಕತ್ತು ಸೀಳಲ್ಪಟ್ಟ ಮೃತದೇಹ ಗದ್ದೆಯಲ್ಲಿ ಪತ್ತೆಯಾಗಿದೆ ಎಂದು ಸಮೀಪದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ತಿಳಿಸಿದೆ.

2018 ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ದೋಷಮುಕ್ತಿಗೊಂಡ ಬಳಿಕ, ಅಸಿಯಾ ಬೀಬಿ ಈಗ ವಿದೇಶವೊಂದರಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News