ಲಕ್ಷ ದಾಟಿದ ಅಮೆರಿಕದ ಕೊರೋನ ಸಾವಿನ ಸಂಖ್ಯೆ

Update: 2020-05-26 16:51 GMT

ವಾಶಿಂಗ್ಟನ್, ಮೇ 26: ನೂತನ-ಕೊರೋನ ವೈರಸ್ ಸಾಂಕ್ರಾಮಿಕದ ಭೀಕರ ದಾಳಿಗೆ ಸಿಲುಕಿರುವ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ ಒಂದು ಲಕ್ಷವನ್ನು ದಾಟಿದ್ದು, ಅನಪೇಕ್ಷಿತ ಮೈಲಿಗಲ್ಲೊಂದನ್ನು ತಲುಪಿದೆ.

ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದು, ಏನು ಮಾಡಬೇಕೆಂದು ತೋಚದೆ ದೇಶವು ದಿಕ್ಕೆಟ್ಟು ಕೂತಿದೆ.

ಅಮೆರಿಕದಲ್ಲಿ ಮಂಗಳವಾರ ಕೊರೋನ ವೈರಸ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 1,00,005ನ್ನು ತಲುಪಿದೆ. ಅದೇ ವೇಳೆ, ದೇಶದಲ್ಲಿ ವರದಿಯಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 17,09,000ವನ್ನು ದಾಟಿದೆ.

ಜಾಗತಿಕ ಮಟ್ಟದಲ್ಲಿ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 3,48,532ನ್ನು ತಲುಪಿದೆ.

ಅದೇ ವೇಳೆ, 56,17,251 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 23,92,914 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

         ಅಮೆರಿಕ1,00,005

         ಬ್ರಿಟನ್36,914

         ಇಟಲಿ32,877

         ಸ್ಪೇನ್26,837

         ಫ್ರಾನ್ಸ್28,432

         ಬ್ರೆಝಿಲ್23,522

         ಬೆಲ್ಜಿಯಮ್9,334

         ಜರ್ಮನಿ8,433

         ಇರಾನ್7,508

         ನೆದರ್‌ಲ್ಯಾಂಡ್ಸ್5,856

         ಕೆನಡ6,545

         ಮೆಕ್ಸಿಕೊ7,633

         ಚೀನಾ4,634

         ಟರ್ಕಿ4,369

         ಸ್ವೀಡನ್4,125

         ಭಾರತ4,188

         ರಶ್ಯ3,807

         ಸ್ವಿಟ್ಸರ್‌ಲ್ಯಾಂಡ್1,915

         ಐರ್‌ಲ್ಯಾಂಡ್1,606

         ಪಾಕಿಸ್ತಾನ1,197

         ಬಾಂಗ್ಲಾದೇಶ522

         ಸೌದಿ ಅರೇಬಿಯ411

         ಯುಎಇ253

         ಅಫ್ಘಾನಿಸ್ತಾನ220

         ಕುವೈತ್172

         ಒಮಾನ್37

         ಖತರ್28

         ಬಹರೈನ್14,      

           ಶ್ರೀಲಂಕಾ10

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News