ಆತ್ಮಹತ್ಯೆಗೆ ಶರಣಾದ ‘ಕ್ರೈಮ್ ಪ್ಯಾಟ್ರೋಲ್’ ನಟಿ ಪ್ರೇಕ್ಷಾ ಮೆಹ್ತಾ

Update: 2020-05-26 17:08 GMT

ಹೊಸದಿಲ್ಲಿ: ಕ್ರೈಮ್ ಪ್ಯಾಟ್ರೋಲ್’ ನಟಿ ಪ್ರೇಕ್ಷಾ ಮೆಹ್ತಾ ಮಧ್ಯಪ್ರದೇಶದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ಮೇರಿ ದುರ್ಗಾ’ ಮತ್ತು ‘ಲಾಲ್ ಇಶ್ಕ್’ ನಂತಹ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಲಾಕ್ ಡೌನ್ ನಿಂದ ಕೆಲಸವಿಲ್ಲದ ಕಾರಣ ಅವರು ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಮುಂಬೈಯಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಇತ್ತೀಚೆಗಷ್ಟೇ ಮನೆಗೆ ಹಿಂದಿರುಗಿದ್ದರು.

ಆತ್ಮಹತ್ಯೆಗೈಯುವ ಮೊದಲು ಅವರು ‘ನೀವು ಸಾಯುವುದರ ಬಗ್ಗೆ ಕನಸು ಕಾಣುವುದೇ ಕೆಟ್ಟ ಸಮಯ’ ಎಂದು ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News