ಕಳೆದ 10 ವರ್ಷಗಳಲ್ಲಿ ಐಸಿಸಿ ಕ್ರಿಕೆಟ್‌ನ್ನು ಯಶಸ್ವಿಯಾಗಿ ಮುಗಿಸಿದೆ: ಅಖ್ತರ್

Update: 2020-05-27 05:49 GMT

ಹೊಸದಿಲ್ಲಿ, ಮೇ 26: ಕಳೆದ 10 ವರ್ಷಗಳಲ್ಲಿ ಐಸಿಸಿ ಕ್ರಿಕೆಟ್‌ನ್ನು ‘ಯಶಸ್ವಿಯಾಗಿ ಮುಗಿಸಿದೆ’. ಅದು ತನ್ನ ಮಂಡಿವೂರಿ ಕೂತಿದೆ ಎಂದು ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿಯ ವಿರುದ್ಧ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಆಕ್ರೋಶ ಹೊರ ಹಾಕಿದ್ದಾರೆ.

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋದ ಪೊಡ್‌ಕಾಸ್ಟ್ ಗಾಗಿ ಸಂಜಯ್ ಮಾಂಜ್ರೇಕರ್‌ರೊಂದಿಗೆ ಸಂವಹನ ನಡೆಸಿದ ಅಖ್ತರ್, ಸೀಮಿತ ಓವರ್ ಕ್ರಿಕೆಟ್‌ನ ಆಡುವ ವಾತಾವರಣದ ಬಗ್ಗೆ ಕಿಡಿಕಾರಿದ್ದಲ್ಲದೆ, ಪಿಚ್ ಕೇವಲ ಬ್ಯಾಟ್ಸ್‌ಮನ್‌ಗೆ ಪೂರಕವಾಗಿ ಸಿದ್ಧಪಡಿಸಲಾಗುತ್ತ್ತಿದೆ ಎಂದರು.

ಸೀಮಿತ ಓವರ್ ಪಂದ್ಯಗಳಲ್ಲಿ ಅತ್ಯಂತ ಮುಖ್ಯವಾಗಿ ಟ್ವೆಂಟಿ-20 ಪಂದ್ಯದಲ್ಲಿ ವೇಗದ ಬೌಲರ್‌ಗಳು ಸ್ವಲ್ಪ ನಿಧಾನವಾಗಿದ್ದರೆ, ಸ್ಪಿನ್ನರ್‌ಗಳು ವೇಗವಾಗಿ ಬೌಲಿಂಗ್ ಮಾಡುವ ಟ್ರೆಂಡ್ ಆರಂಭವಾಗಿದೆಯಲ್ಲ ಎಂದು ಮಾಂಜ್ರೇಕರ್ ಕೇಳಿದಾಗ ಅಖ್ತರ್ ಐಸಿಸಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.

‘‘ನಾನು ನಿಮಗೆ ಏನಾದರೂ ಸ್ಪಷ್ಟವಾಗಿ ಹೇಳಬಹುದೇ? ಅವರು(ಐಸಿಸಿ ಅಧಿಕಾರಿಗಳು)ಕ್ರಿಕೆಟ್‌ನ್ನು ಮುಗಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಐಸಿಸಿ ಕ್ರಿಕೆಟ್‌ನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ನಾನು ಬಹಿರಂಗವಾಗಿಯೇ ಹೇಳುತ್ತಿದ್ದೇನೆ ಹಾಗೂ ಕೆಲಸ ಚೆನ್ನಾಗಿ ಮಾಡಿದ ಹುಡುಗರ ಬಗ್ಗೆಯೂ ಮಾತನಾಡಿದ್ದೆ. ಜೋ ಸೋಚಾ ಥಾ ಅಪ್ನೆ ವೋ ಕಿಯಾ(ನೀವು ಉದ್ದೇಶಿಸಿದ್ದನ್ನು ಮಾಡಿದ್ದೀರಿ)’’ಎಂದು ಅಸಂಗತ ಶೈಲಿಯಲ್ಲಿ ಅಖ್ತರ್ ಹೇಳಿದರು. ‘‘ಬೌನ್ಸರ್ ನಿಯಮ(ಪ್ರತಿ ಓವರ್‌ಗೆ ಒಂದು)ಬದಲಾಯಿಸಿ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಕಳೆದ 10 ವರ್ಷಗಳಲ್ಲಿ ಕ್ರಿಕೆಟ್‌ನ ಗುಣಮಟ್ಟ ಏರಿಕೆಯಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದನ್ನು ದಯವಿಟ್ಟು ಐಸಿಸಿ ಬಳಿ ಕೇಳಬೇಕು. ಆ ಸಚಿನ್-ಅಖ್ತರ್ ನಡುವಿನ ಸ್ಪರ್ಧೆ ಎಲ್ಲಿದೆ? ಎಂದು ಅಖ್ತರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News