ಸಿನೆಮಾ ಪ್ರೇಮಿಗಳ ನೆನಪಿನ ಪರದೆಯ ಅಚ್ಚಳಿಯದ ಮುದ್ರೆ ಗೌಂಡಮಣಿ

Update: 2020-05-27 08:35 GMT

ಮೇ 25ಕ್ಕೆ ಗೌಂಡಮಣಿ 81ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮಿಳು ಚಿತ್ರರಂಗದಲ್ಲಿ ಇಂದು ಅಸಂಖ್ಯಾತ ಹಾಸ್ಯನಟರು ಬಂದಿದ್ದರೂ, ಈ ಅಪೂರ್ವ ನಟ ಮಾತ್ರ ಪ್ರೇಕ್ಷಕರ ನೆನಪಿನ ಪರದೆಯಲ್ಲಿ ಅಚ್ಚಳಿಯದ ಮುದ್ರೆ ಒತ್ತಿದ್ದಾರೆ.

ಇಡ್ಲಿ-ಸಾಂಬಾರ್, ಪರೋಟಾ-ಕೂರ್ಮಾದಂತೆ ಸೆಂಥಿಲ್-ಗೌಂಡಮಣಿ ಜೋಡಿ ತಮಿಳು ಚಿತ್ರರಸಿಕರಿಗೆ ಅಚ್ಚುಮೆಚ್ಚು. ಏಕೆ ಎನ್ನುವುದು ನಿರ್ದಿಷ್ಟವಾಗಿ ಯಾರೂ ಹೇಳಲಾಗದು.

ತಮಿಳು ಸಿನಿಮಾದ ‘ಲೌರೆಲ್’ ಮತ್ತು ‘ಹರ್ಡಿ’ ಎಂದೇ ಖ್ಯಾತರಾಗಿದ್ದ ಗೌಂಡಮಣಿ ಹಾಗೂ ಸೆಂಥಿಲ್ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ‘ಸರ್ವರ್ ಸುಂದರಮ್’ ಚಿತ್ರದ ಮೂಲಕ ಗೌಂಡಮಣಿ ಪಾದಾರ್ಪಣೆ ಮಾಡಿದರೆ, ‘ಇತ್ತಿಕರ ಪಕ್ಕಿ’ ಎಂಬ ಮಲೆಯಾಳಂ ಚಿತ್ರದ ಮೂಲಕ ಸೆಂಥಿಲ್ ಕಾಲಿಟ್ಟರು. ಸೆಂಥಿಲ್ ಚಿತ್ರರಂಗಕ್ಕೆ ಬರುವ ವೇಳೆಗಾಗಲೇ ರಜನೀಕಾಂತ್ ಅವರ ‘16 ವಯದಿನಿಲೆ’ ಚಿತ್ರದ ಮೂಲಕ ಗೌಂಡಮಣಿ ಯಶಸ್ವಿ ಹಾಸ್ಯನಟ ಎನಿಸಿಕೊಂಡಿದ್ದರು.

ಹರಿತ ನಾಲಿಗೆ ಹಾಗೂ ಥಟ್ಟನೇ ಎದುರುತ್ತರ ನೀಡುವ ಚಾಕಚಕ್ಯತೆಯಿಂದಾಗಿ ‘ಸುಬ್ರಮಣಿ ಕರುಪಯ್ಯ’, ‘ಕೌಂಟರ್ ಮಣಿ’ ಅಥವಾ ‘ಗೌಂಡಮಣಿ’ ಎಂದೇ ಪ್ರಖ್ಯಾತರಾದರು. ಸೆಂಥಿಲ್ ಆಗಮನದ ಬಳಿಕ ಈ ಹಿರಿ- ಕಿರಿಯ ಜೋಡಿ ಎರಡು ದಶಕದ ಕಾಲ ತಮಿಳು ಚಿತ್ರರಂಗವನ್ನು ಆಳಿತು. ಸೆಂಥಿಲ್ ಸದಾ ಮೂರ್ಖ ಹಾಗೂ ವಂಚಕ ಪಾತ್ರಕ್ಕೆ ಹೆಸರಾಗಿದ್ದರು. ಗೌಂಡಮಣಿ ನಾಲಿಗೆ ತುದಿಯಿಂದ ಬೈಗುಳ ಅನಾಯಾಸವಾಗಿ ಹರಿದು ಬರುತ್ತಿತ್ತು.

ಒಂದು ದಶಕದಿಂದ ಸೆಂಥಿಲ್- ಗೌಂಡಮಣಿ ಜೋಡಿ ಯಾವ ಚಿತ್ರದಲ್ಲೂ ಜತೆಯಾಗಿ ನಟಿಸದಿದ್ದರೂ ಈ ಜೋಡಿ ಚಿತ್ರರಸಿಕರ ಚಿರನೆನಪು.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News