×
Ad

ಪ್ರಧಾನಿಯನ್ನು ಅವಮಾನಿಸಿ ಪೋಸ್ಟ್ ಆರೋಪ: ‘ಸರಿಗಮಪ’ ರನ್ನರ್ ಅಪ್ ವಿರುದ್ಧ ಎಫ್‍ಐಆರ್

Update: 2020-05-28 13:47 IST

ಅಗರ್ತಲಾ :  ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶಿ ಗಾಯಕ ಮೈನುಲ್ ಅಹ್ಸನ್ ನೊಬಲ್ ಅವರ ವಿರುದ್ಧ ತ್ರಿಪುರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈನುಲ್ ಅವರು ಕಳೆದ ವರ್ಷ ಝೀ ಬಾಂಗ್ಲಾ ನಡೆಸಿದ್ದ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ದಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ಗುಜರಾತ್‍ನ ಗಾಂಧಿನಗರದ ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿವಿಯಲ್ಲಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸುಮನ್ ಪೌಲ್ ಎಂಬವರು ಈ ದೂರನ್ನು ಬೆಲೋನಿಯಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

“ಗಾಯಕನನ್ನು ಆತನ ದೇಶ ಯಾವತ್ತೂ ತಿರಸ್ಕರಿಸಿತ್ತು. ಆತ ನನ್ನ ದೇಶಕ್ಕೆ ಬಂದು ಖ್ಯಾತಿ ಗಳಿಸಿ, ಹಣವನ್ನೂ ಗಳಿಸಿ ಬಾಂಗ್ಲಾದೇಶಕ್ಕೆ ತೆರಳಿ ನಮ್ಮ ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿದ್ದಾರೆ. ಅವರ ಕೃತ್ಯವನ್ನು  ಒಪ್ಪಲು ಸಾಧ್ಯವಿಲ್ಲ, ಅದಕ್ಕಾಗಿ ದೂರು ದಾಖಲಿಸಿದ್ದೇನೆ'' ಎಂದು ಸುಮನ್ ಹೇಳಿದ್ದಾರೆ.

ಎಫ್‍ಐಆರ್ ಅನ್ನು ಐಪಿಸಿಯ ಸೆಕ್ಷನ್ 500, 504, 505 ಹಾಗೂ 153 ಹಾಗೂ ಐಟಿ ಕಾಯಿದೆಯನ್ವಯ ದಾಖಲಿಸಲಾಗಿದೆ ಹಾಗೂ ಪ್ರಕರಣವನ್ನು ತ್ರಿಪುರಾ ಪೊಲೀಸರ ಸೈಬರ್ ಅಪರಾಧ ಸೆಲ್‍ಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News