36ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್‌ ಮುಂದೂಡಿಕೆ

Update: 2020-05-29 05:49 GMT

ಹೊಸದಿಲ್ಲಿ, ಮೇ 28: ಗೋವಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿದ್ದ 36ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್‌ನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕೆ ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ವರ್ಷದ ಅಕ್ಟೋಬರ್ 20ರಿಂದ ನವೆಂಬರ್ 4ರ ತನಕ ನಿಗದಿಯಾಗಿರುವ ರಾಷ್ಟ್ರೀಯ ಗೇಮ್ಸ್ ನ್ನು ಗೋವಾ ಸರಕಾರವೇ ಆತಿಥ್ಯವಹಿಸಬೇಕು ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಇತ್ತೀಚೆಗೆ ಒತ್ತಾಯಿಸಿತ್ತು.

ನೊವೆಲ್ ಕೊರೋನ ವೈರಸ್ ಕಾರಣಕ್ಕೆ ಹಲವು ಟೂರ್ನಿಗಳು ಮುಂದೂಡಿಕೆಯಾಗಿವೆ.

‘‘ಕೋವಿಡ್-19 ಪಿಡುಗಿನ ಕಾರಣಕ್ಕೆ ರಾಷ್ಟ್ರೀಯ ಗೇಮ್ಸ್‌ನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ರಾಷ್ಟ್ರೀಯ ಗೇಮ್ಸ್ ಸಂಘಟನಾ ಸಮಿತಿಯು ನಿರ್ಧರಿಸಿದೆ’’ ಎಂದು ಗೋವಾದ ಉಪ ಮುಖ್ಯಮಂತ್ರಿ ಮನೋಜರ್(ಬಾಬು)ಅಜಗಾಂವ್ಕರ್ ಹೇಳಿದ್ದಾರೆ.

 ಕ್ರೀಡಾ ಸಚಿವರೂ ಆಗಿರುವ ಅಜಗಾಂವ್ಕರ್ ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ಹಂಚಿಕೊಂಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ರಾಷ್ಟ್ರೀಯ ಗೇಮ್ಸ್ ಸಂಘಟನಾ ಸಮಿತಿಯು ಸೆಪ್ಟಂಬರ್ ಅಂತ್ಯದಲ್ಲಿ ಸಭೆ ಸೇರಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ದಿನಾಂಕವನ್ನು ನಿಗದಿಪಡಿಸುವ ಕುರಿತು ತೀರ್ಮಾನಿಸಲಿದೆ. ಗೋವಾ ಸರಕಾರವು ಕೇಂದ್ರ ಕ್ರೀಡಾ ಸಚಿವಾಲಯದಿಂದ ಸಲಹೆ ಪಡೆದುಕೊಳ್ಳಬೇಕು. ಗೇಮ್ಸ್ ಆಯೋಜನೆಗೆ ನಾಲ್ಕು ತಿಂಗಳ ಮುಂಗಡ ನೋಟಿಸ್ ಅಗತ್ಯವಿದೆ’’ಎಂದು ಅಜಗಾಂವ್ಕರ್ ಹೇಳಿದ್ದಾರೆ.

ಕಳೆದ ಆವೃತ್ತಿಯ ಗೇಮ್ಸ್ 2011ರಲ್ಲಿ ಜಾರ್ಖಂಡ್‌ನಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News