ಪೈಲಟ್‌ಗೆ ಕೋವಿಡ್-19: ಪ್ರಯಾಣ ಮೊಟಕುಗೊಳಿಸಿ ಏರ್ ಇಂಡಿಯಾದ ದಿಲ್ಲಿ-ಮಾಸ್ಕೋ ವಿಮಾನ ವಾಪಸ್

Update: 2020-05-30 09:32 GMT

 ಹೊಸದಿಲ್ಲಿ ಮೇ 30: ದಿಲ್ಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗ ಮಧ್ಯದಲ್ಲೆ ತನ್ನ ಪ್ರಯಾಣವನ್ನು ಮೊಟಕುಗೊಳಿಸಿ ವಾಪಸಾಗಿರುವ ಘಟನೆ ಶನಿವಾರ ನಡೆದಿದೆ. ವಿಮಾನದಲ್ಲಿದ್ದ ಓರ್ವ ಪೈಲಟ್‌ಗೆ ಕೋವಿಡ್-19 ದೃಢಪಟ್ಟಿರುವುದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳಿಗೆ ಗೊತ್ತಾದ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದ ಖಾಲಿ ವಿಮಾನವನ್ನು ವಾಪಸ್ ಕರೆಸಲಾಗಿದೆ.

ವಂದೇ ಭಾರತ್ ಮಿಷನ್ ಅಭಿಯಾನದಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಮಾಸ್ಕೋಗೆ ಹೊರಟಿದ್ದ ಪ್ರಯಾಣಿಕರಿಲ್ಲದ ಎ-320 ವಿಮಾನ ಉಝ್ಬೇಕಿಸ್ತಾನದ ವಾಯುನೆಲೆಗೆ ತಲುಪಿತ್ತು. ಅಲ್ಲಿದ್ದ ನಮ್ಮ ತಂಡಕ್ಕೆ ಓರ್ವ ಪೈಲಟ್ ಕೋವಿಡ್-19 ಟೆಸ್ಟ್‌ನಲ್ಲಿ ಪಾಸಿಟಿವ್ ಆಗಿರುವ ಅಂಶ ಗೊತ್ತಾಗಿತ್ತು ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಮಾನವನ್ನು ತಕ್ಷಣವೇ ವಾಪಾಸು ಬರಲು ತಿಳಿಸಲಾಯಿತು. ಶನಿವಾರ ಮಧ್ಯಾಹ್ನ 12:30ಕ್ಕೆ ವಿಮಾನ ದಿಲ್ಲಿಗೆ ವಾಪಾಸಾಗಿದೆ. ಪೈಲಟ್‌ನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆತರಲು ಮಾಸ್ಕೋಗೆ ಮತ್ತೊಂದು ವಿಮಾನವನ್ನು ಕಳುಹಿಸಿಕೊಡಲಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News