ಮೆರಿಕದಲ್ಲಿ ಜನಾಂಗೀಯ ತಾರತಮ್ಯ ಸಾಮಾನ್ಯ ಎಂದಾಗಬಾರದು: ಬರಾಕ್ ಒಬಾಮ

Update: 2020-05-30 15:43 GMT

ವಾಶಿಂಗ್ಟನ್, ಮೇ 30: ಮಿನಸೋಟ ರಾಜ್ಯದ ಮಿನಪೊಲಿಸ್‌ನಲ್ಲಿ ಕರಿಯ ವ್ಯಕ್ತಿಯೊಬ್ಬರು ಪೊಲೀಸರಿಂದ ಹತರಾದ ಘಟನೆಯ ಬಗ್ಗೆ ಅಮೆರಿಕದ ಕೋಟ್ಯಂತರ ಜನರಲ್ಲಿರುವಂತೆ ನನ್ನಲ್ಲೂ ಆಕ್ರೋಶವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಶುಕ್ರವಾರ ಹೇಳಿದ್ದಾರೆ. ಅದೇ ವೇಳೆ, ಅಮೆರಿಕದಲ್ಲಿ ಜನಾಂಗೀಯ ತಾರತಮ್ಯವು ಸಾಮಾನ್ಯವೆಂಬಂತಾಗಬಾರದು ಎಂದಿದ್ದಾರೆ.

2020ರ ಅಮೆರಿಕದಲ್ಲಿ ಇದು ಸಾಮಾನ್ಯ ಸಂಗತಿ ಎಂದಾಗಬಾರದು ಎಂದು ಮಿನಪೊಲಿಸ್‌ನ ಜಾರ್ಜ್ ಫ್ಲಾಯ್ಡಾರ ಹತ್ಯೆ ಹಾಗೂ ದೇಶದಲ್ಲಿ ಇತ್ತೀಚೆಗೆ ನಡೆದಿರುವ ಇತರ ಹಲವಾರು ಜನಾಂಗೀಯ ತಾರತಮ್ಯದ ಘಟನೆಗಳನ್ನು ಉಲ್ಲೇಖಿಸುತ್ತಾ ಒಬಾಮ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬರಾಕ್ ಒಬಾಮ ಅಮೆರಿಕದ ಮೊದಲ ಆಫ್ರಿಕನ್ ಅಮೆರಿಕನ್ ಅಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News