ಇಬ್ಬರು ವಿಶ್ವಸಂಸ್ಥೆ ಶಾಂತಿಪಾಲಕರು ಕೊರೋನ ವೈರಸ್‌ಗೆ ಬಲಿ

Update: 2020-05-30 15:54 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಮೇ 30: ಮಾಲಿ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಇಬ್ಬರು ಯೋಧರು ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ.

ಪ್ರಸಕ್ತ ಸುಮಾರು ಒಂದು ಲಕ್ಷ ವಿಶ್ವಸಂಸ್ಥೆ ಶಾಂತಿಪಾಲಕರು ಜಗತ್ತಿನಾದ್ಯಂತ ಸುಮಾರು 15 ದೇಶಗಳಲ್ಲಿ ಶಾಂತಿ ಸ್ಥಾಪಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಪೈಕಿ ಕೊರೋನ ವೈರಸ್‌ಗೆ ಬಲಿಯಾಗಿರುವವರಲ್ಲಿ ಇವರೇ ಮೊದಲಿಗರಾಗಿದ್ದಾರೆ.

ದುರದೃಷ್ಟವಶಾತ್, ನಮ್ಮ ಇಬ್ಬರು ಸೇನಾ ಸಹೋದ್ಯೋಗಿಗಳು ನಿನ್ನೆ ಮತ್ತು ಇಂದು ಕೋವಿಡ್-19ಕ್ಕೆ ಬಲಿಯಾಗಿದ್ದಾರೆ ಎನ್ನುವುದನ್ನು ತಿಳಿಸಲು ವಿಷಾದವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದರು.

ಸಂಘರ್ಷಗಳಲ್ಲಿ ಮೃತಪಟ್ಟಿರುವ ಶಾಂತಿಪಾಲಕರನ್ನು ಗೌರವಿಸಲು ಶುಕ್ರವಾರ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಮೃತಪಟ್ಟ ಶಾಂತಿ ಯೋಧರ ಪೈಕಿ ಓರ್ವ ಕಾಂಬೋಡಿಯದವರು ಹಾಗೂ ಇನ್ನೊಬ್ಬರು ಎಲ್ ಸಾಲ್ವಡೊರ್‌ನವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News