ಬಿರುಗಾಳಿಯಿಂದ ತಾಜ್‌ಮಹಲ್ ಮ್ಯೂಸಿಯಂ ರೇಲಿಂಗ್ಸ್‌ಗೆ ಹಾನಿ

Update: 2020-05-31 05:00 GMT

ಆಗ್ರಾ : ವಿಶ್ವವಿಖ್ಯಾತ ತಾಜ್‌ಮಹಲ್‌ನ ಮ್ಯೂಸಿಯಂ ಶುಕ್ರವಾರ ರಾತ್ರಿ ಬೀಸಿದ ಭಾರಿ ಮಳೆ ಸಹಿತ ಬಿರುಗಾಳಿಗೆ ಹಾನಿಯಾಗಿದೆ.
ಮುಖ್ಯ ಮ್ಯೂಸಿಯಂನ ಮಾರ್ಬಲ್ ರೇಲಿಂಗ್ಸ್ ಮತ್ತು ಮರಳುಗಲ್ಲಿನ ರೇಲಿಂಗ್ಸ್‌ಗೆ ಹಾನಿಯಾಗಿದೆ. ಆವರಣದಲ್ಲಿದ್ದ ಮರವೊಂದು ಬುಡಮೇಲಾಗಿ ಬಿದ್ದ ಪರಿಣಾಮವಾಗಿ ಒಂದು ಬಾಗಿಲಿಗೂ ಹಾನಿಯಾಗಿದೆ ಎಂದು ಎಎಸ್‌ಐ ಅಧೀಕ್ಷಕ ಪ್ರಾಚ್ಯಶಾಸ್ತ್ರಜ್ಞ ಬಸಂತ್ ಕುಮಾರ್ ಸ್ವರ್ಣಕಾರ್ ಹೇಳಿದ್ದಾರೆ.

ಮ್ಯೂಸಿಯಂನ ಫಾಲ್ಸ್ ಸೀಲಿಂಗ್‌ಗೆ ಕೂಡಾ ಹಾನಿಯಾಗಿದೆ. ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಿಂದ ಮೈನ್‌ಪುರಿ, ಆಗ್ರಾ ಮತ್ತು ಲಖೀಂಪುರ ಖಿರಿ ಪ್ರದೇಶದಲ್ಲಿ, ಮುಝಾಫರ್‌ನಗರದಲ್ಲಿ ಆಗಿರುವ ಜೀವಹಾನಿ ಬಗ್ಗೆ ಮುಖ್ಯಮಂತ್ರಿ ಆದಿತ್ಯನಾಥ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News