ಮಹಾರಾಷ್ಟ್ರ, ಗುಜರಾತ್‌ಗೆ ಚಂಡಮಾರುತ ಭೀತಿ

Update: 2020-05-31 18:13 GMT

ಮುಂಬೈ,ಮೇ 31: ಅಂಫಾನ್ ಚಂಡಮಾರುತದ ಹಾವಳಿ ನಡೆದ ಕೆಲವೇ ದಿನಗಳ ಬಳಿಕ ಭಾರತಕ್ಕೆ ಇನ್ನೊಂದು ಪ್ರಬಲ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ನಿಮ್ನ ವಾಯುಭಾರ ಒತ್ತದಿಂದಾಗಿ ಚಂಡಮಾರುತವೊಂದು ರೂಪುಗೊಳ್ಳುತ್ತಿದ್ದು, ಅದು ಜೂನ್ 3ರೊಳಗೆ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಕರಾವಳಿಯೆಡೆಗೆ ಚಲಿಸುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಅರಬ್ಬಿ ಸಮುದ್ರ ಹಾಗೂ ಲಕ್ಷದ್ವೀಪದ ಪ್ರದೇಶದ ಈಶಾನ್ಯ ಹಾಗೂ ಪೂರ್ವ ಮಧ್ಯಭಾಗದಲ್ಲಿ ನಿಮ್ನ ವಾಯುಭಾರ ಒತ್ತಡವುಂಟಾಗಿದ್ದು, ಅದು ಪ್ರಬಲಚಂಡಮಾರುತವೊದು ರೂಪುಗೊಳ್ಳುವ ಸಾಧ್ಯತೆಯಿದ್ದು, ಅದು ಬುಧವಾರ ಮಹಾರಾಶ್ಟ್ರ ಕರಾವಳಿಗೆ ಚಲಿಸಲಿದೆ. ಇದರಿಂದಾಗಿ ಪಶ್ಚಿಮ ಕರಾವಳಿ ಪ್ರದೇಶ ವಿವಿಧೆಡೆ ಬಾರೀ ಮಳೆಯಾಗುವ ಸಾಧ್ಯತೆಯಿದೆಯೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News