ಮಗುವಿಗೆ ಜನ್ಮ ನೀಡಿದ ಕೋವಿಡ್-19 ರೋಗಿ

Update: 2020-06-02 15:12 GMT

ಸಾಗರ, ಜೂ.2: ಮಧ್ಯಪ್ರದೇಶದ ಸಾಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕುಪೀಡಿತ ಮಹಿಳೆಯೋರ್ವಳು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

24ರ ಹರೆಯದ ಈ ಮಹಿಳೆಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟ ಬಳಿಕ ಸೋಮವಾರ ಬುಂದೇಲಖಂಡ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಂದೇ ರಾತ್ರಿ ವೈದ್ಯರ ತಂಡವೊಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರಗೆ ತೆಗೆದಿದ್ದು,ಈ ವೇಳೆ ಐಸಿಎಂಆರ್ ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತು ಎಂದು ಡಾ.ಉಮೇಶ್ ಪಟೇಲ್ ತಿಳಿಸಿದರು.

ಮಹಿಳೆಯು ಈಗಾಗಲೇ ಸೋಂಕಿಗೆ ತುತ್ತಾಗಿರುವುದರಿಂದ ಮಗುವನ್ನೂ ಕೊರೋನ ವೈರಸ್ ಪರೀಕ್ಷೆಗೊಳಪಡಿಸಲಾಗುವುದು. ಇದಕ್ಕೂ ಮುನ್ನ ಕುಟುಂಬದ ಇಬ್ಬರು ಸೋಂಕಿಗೆ ತುತ್ತಾಗಿದ್ದರಿಂದ ಮಹಿಳೆಗೆ ಕ್ವಾರಂಟೈನ್ ವಿಧಿಸಲಾಗಿತ್ತು. ಸೋಮವಾರ ಆಕೆಯ ವರದಿ ಪಾಸಿಟಿವ್ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News