ಕೋವಿಡ್-19: ಎರಡು ಲಕ್ಷದತ್ತ ಕೊರೋನ ಪ್ರಕರಣಗಳು

Update: 2020-06-02 15:18 GMT

ಹೊಸದಿಲ್ಲಿ, ಜೂ.2: ದೇಶದಲ್ಲಿ ಮಂಗಳವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 8,171 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,98,706ಕ್ಕೇರಿದೆ. ಈ ಅವಧಿಯಲ್ಲಿ ಇನ್ನೂ 204 ಸಾವುಗಳು ಸಂಭವಿಸಿದ್ದು, ಒಟ್ಟು ಸಾವುಗಳ ಸಂಖ್ಯೆ 5,598ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 97,581ಕ್ಕೇರಿದ್ದು, 95,526 ರೋಗಿಗಳು (ಸುಮಾರು ಶೇ.48.07) ಗುಣಮುಖರಾಗಿದ್ದರೆ ಓರ್ವ ರೋಗಿಯನ್ನು ಸ್ವದೇಶಕ್ಕೆ ಮರಳಿಸಲಾಗಿದೆ. ಒಟ್ಟು ದೃಢೀಕೃತ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಸೋಮವಾರ ಬೆಳಿಗ್ಗೆಯಿಂದೀಚಿಗೆ ವರದಿಯಾಗಿರುವ 204 ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ 76, ದಿಲ್ಲಿಯಲ್ಲಿ 50, ಗುಜರಾತಿನಲ್ಲಿ 25, ತಮಿಳುನಾಡಿನಲ್ಲಿ 11, ಪ.ಬಂಗಾಳ ಮತ್ತು ಮಧ್ಯಪ್ರದೇಶಗಳಲ್ಲಿ ತಲಾ ಎಂಟು, ತೆಲಂಗಾಣದಲ್ಲಿ ಆರು, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ತಲಾ ನಾಲ್ಕು, ಬಿಹಾರ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ ಮೂರು, ಆಂಧ್ರಪ್ರದೇಶದಲ್ಲಿ ಎರಡು, ಹರ್ಯಾಣ, ಕರ್ನಾಟಕ, ಕೇರಳ ಮತ್ತು ಉತ್ತರಾಖಂಡಗಳಲ್ಲಿ ತಲಾ ಒಂದು ಸಾವುಗಳು ಸಂಭವಿಸಿವೆ.

ಒಟ್ಟು 5,598 ಸಾವುಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (2,362) ಅಗ್ರಸ್ಥಾನದಲ್ಲಿದ್ದರೆ ಗುಜರಾತ (1,063), ದಿಲ್ಲಿ (523), ಮಧ್ಯಪ್ರದೇಶ (358), ಪ.ಬಂಗಾಳ (335), ಉತ್ತರ ಪ್ರದೇಶ (217), ರಾಜಸ್ಥಾನ (198), ತಮಿಳುನಾಡು (184), ತೆಲಂಗಾಣ (88), ಆಂಧ್ರಪ್ರದೇಶ (64), ಕರ್ನಾಟಕ (52), ಪಂಜಾಬ(45), ಜಮ್ಮು-ಕಾಶ್ಮೀರ (31),ಬಿಹಾರ (24), ಹರ್ಯಾಣ (21), ಕೇರಳ (10), ಒಡಿಶಾ (7) ಉತ್ತರಾಖಂಡ (6), ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ (ತಲಾ 5), ಚಂಡಿಗಡ ಮತ್ತು ಅಸ್ಸಾಂ(ತಲಾ 4), ಮೇಘಾಲಯ ಮತ್ತು ಛತ್ತೀಸ್‌ಗಡ (ತಲಾ 1) ನಂತರದ ಸ್ಥಾನಗಳಲ್ಲಿವೆ.

ಈ ಪೈಕಿ ಶೇ.70ಕ್ಕೂ ಅಧಿಕ ಪ್ರಕರಣಗಳಲ್ಲಿ ಮೃತರು ಇತರ ರೋಗಗಳನ್ನೂ ಹೊಂದಿದ್ದರು ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News