ಚಹಾಲ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ಯುವರಾಜ್ ವಿರುದ್ಧ ‘ಮಾಫಿ ಮಾಂಗೊ’ ಅಭಿಯಾನ

Update: 2020-06-02 15:41 GMT

ಹೊಸದಿಲ್ಲಿ, ಜೂ.2: ಟೀಮ್ ಇಂಡಿಯಾದ ಓಪನರ್ ರೋಹಿತ್ ಶರ್ಮಾ ಅವರೊಂದಿಗೆ ಯುವರಾಜ್ ಸಿಂಗ್ ಸಂಭಾಷಣೆ ನಡೆಸುತ್ತಿದ್ದ ವೀಡಿಯೊ ತುಣುಕು ವೈರಲ್ ಆಗಿದ್ದು, ಇದರಲ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಮಸ್ಯೆಗೆ ಸಿಲುಕಿದ್ದಾರೆ.

ಎಪ್ರಿಲ್‌ನಲ್ಲಿ ರೋಹಿತ್ ಹಾಗೂ ಯುವರಾಜ್, ಚಹಾಲ್ ಅವರ ಟಿಕ್‌ಟಾಕ್ ವೀಡಿಯೊಗಳಿಗೆ ಸಂಬಂಧಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾತನಾಡಿದ್ದು, ಚಹಾಲ್ ಅವರ ಟಿಕ್‌ಟಾಕ್ ವೀಡಿಯೊವನ್ನು ಉಲ್ಲೇಖಿಸಿದ ಯುವಿ, ಚಹಾಲ್‌ಗೆ ಟಿಕ್‌ಟಾಕ್ ಗೀಳು ಜಾಸ್ತಿ ಎಂದು ಹೇಳುವಾಗ ಜಾತಿ ಉಲ್ಲೇಖಿಸಿದ್ದರು. ಇದೀಗ ಸಂಭಾಷಣೆಯ ಸಣ್ಣ ಕ್ಲಿಪ್ ವ್ಯಾಪಕವಾಗಿ ಶೇರ್ ಆಗಿದ್ದು, ಯುವರಾಜ್ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕೆಂದು ಟ್ವಿಟರ್‌ನಲ್ಲಿ ‘ಯುವರಾಜ್ ಸಿಂಗ್ ಮಾಫಿ ಮಾಂಗೊ’ ಎಂಬ ಅಭಿಯಾನವನ್ನೇ ಆರಂಭಿಸಲಾಗಿದೆ. ಟ್ವಿಟರ್‌ನಲ್ಲಿ ಸುಮಾರು 26,000 ಮಂದಿ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಚಹಾಲ್ ಲಾಕ್‌ಡೌನ್ ವೇಳೆ ಟಿಕ್‌ಟಾಕ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ತನ್ನ ಕುಟುಂಬ ಸದಸ್ಯರುಗಳೊಂದಿಗಿದ್ದ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ತನ್ನ ಸಹ ಆಟಗಾರರು ನಡೆಸುತ್ತಿದ್ದ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News