×
Ad

ನೆಗೆಟಿವ್ ಫಲಿತಾಂಶ ಬಂದವರನ್ನು ಕ್ವಾರಂಟೈನ್ ನಲ್ಲಿ ಇರಿಸುವುದು ಸಂವಿಧಾನ ನೀಡಿದ ಹಕ್ಕಿನ ಉಲ್ಲಂಘನೆ: ಹೈಕೋರ್ಟ್

Update: 2020-06-02 22:12 IST

ಹೊಸದಿಲ್ಲಿ: ಕ್ವಾರಂಟೈನ್ ಅವಧಿ ಪೂರ್ಣಗೊಂಡವರು ಮತ್ತು ನೆಗೆಟಿವ್ ಫಲಿತಾಂಶ ಬಂದವರನ್ನು ಕ್ವಾರಂಟೈನ್ ಸೆಂಟರ್ ನಲ್ಲಿ ಇರಿಸಬಾರದು. ಏಕೆಂದರೆ ಈ ರೀತಿ ಕ್ವಾರಂಟೈನ್ ನಲ್ಲಿ ಇರಿಸುವುದು ಸಂವಿಧಾನದ 21ನೆ ಕಲಂನಡಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅಲಹಾಬಾದ್ ಕೋರ್ಟ್ ತೀರ್ಪಿತ್ತಿದೆ.

ಹೀಗೆ ಕ್ವಾರಂಟೈನ್ ನಲ್ಲಿ ಇರಿಸುವುದು ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಜಸ್ಟಿಸ್ ಶಶಿಕಾಂತ್ ಗುಪ್ತಾ ಮತ್ತು ಜಸ್ಟಿಸ್ ಸೌರಭ್ ಶ್ಯಾಮ್ ಶಂಶೇರಿಯವರಿದ್ದ ಪೀಠ ಹೇಳಿದೆ.

ಮಾರ್ಚ್ 5ರಿಂದ ಉತ್ತರ ಪ್ರದೇಶದಲ್ಲಿ ಕ್ವಾರಂಟೈನ್ ನಲ್ಲಿರುವ ತಬ್ಲೀಗಿ ಜಮಾತ್ ಸದಸ್ಯರ ಬಿಡುಗಡೆಯನ್ನು ಕೋರಿ ವಕೀಲ ಶಾದ್ ಅನ್ವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಈ ಆದೇಶ ನೀಡಿದೆ.

ವಲಸೆ ಕಾರ್ಮಿಕರು ಸೇರಿ ಹಲವರನ್ನು ಕ್ವಾರಂಟೈನ್ ಸೆಂಟರ್ ನಲ್ಲಿ ಇರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News