ಪ್ರತಿಭಟನೆಯಲ್ಲಿ ಹಿಂಸೆಯನ್ನು ಖಂಡಿಸಿದ ಒಬಾಮ: ಶಾಂತಿಯುತ ಪ್ರತಿಭಟನಕಾರರಿಗೆ ಶ್ಲಾಘನೆ

Update: 2020-06-02 16:55 GMT

ವಾಶಿಂಗ್ಟನ್, ಜೂ. 2: ಜನಾಂಗೀಯ ತಾರತಮ್ಯ ಮತ್ತು ಪೊಲೀಸರ ಅಧಿಕ ಬಲಪ್ರಯೋಗವನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಹಿಂಸೆಯ ಬಳಕೆಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೋಮವಾರ ಖಂಡಿಸಿದ್ದಾರೆ. ಅದೇ ವೇಳೆ, ಬದಲಾವಣೆಗಾಗಿ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಪ್ರತಿಭಟನಕಾರರನ್ನು ಶ್ಲಾಘಿಸಿದ್ದಾರೆ.

ಅಗಾಧ ಸಂಖ್ಯೆಯ ಪ್ರತಿಭಟನಕಾರರು ಶಾಂತಿಯುತವಾಗಿ ವರ್ತಿಸುತ್ತಿದ್ದಾರೆ, ಆದರೆ, ಕೆಲವೇ ಕೆಲವು ಜನರು ಜನರನ್ನು ಅಪಾಯಕ್ಕೆ ಗುರಿಪಡಿಸುತ್ತಿದ್ದಾರೆ ಹಾಗೂ ಈ ಪ್ರತಿಭಟನೆಗಳು ಯಾರಿಗೆ ಸಹಾಯ ಮಾಡಬೇಕೋ ಅವೇ ಸಮುದಾಯಗಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ‘ಮೀಡಿಯಮ್’ನಲ್ಲಿ ಹಾಕಿದ ಆನ್‌ಲೈನ್ ಪ್ರಬಂಧದಲ್ಲಿ ಒಬಾಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News