ಉ.ಪ್ರದೇಶ: 69,000 ಶಿಕ್ಷಕರ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ

Update: 2020-06-03 15:35 GMT

ಲಕ್ನೋ, ಜೂ.3: ಉತ್ತರಪ್ರದೇಶದಲ್ಲಿ 69,000 ಸಹಾಯಕ ಶಿಕ್ಷಕರ ನೇಮಕಾತಿಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತಡೆಯಾಜ್ಞೆ ನೀಡಿದ್ದು, ಶಿಕ್ಷಕರ ನೇಮಕಾತಿಗೆ ಅನುಸರಿಸಿದ ಪ್ರಕ್ರಿಯೆಯನ್ನು ನಕ್ಷೆಯ ಮೂಲಕ ವಿವರಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂದರ್ಭ ಸಾಮಾನ್ಯ(ಜನರಲ್) ವಿಭಾಗದವರಿಗೆ ನಿಗದಿಗೊಳಿಸಿದ್ದ 45% ಕಟ್‌ಆಫ್ ಅಂಕ ಮತ್ತು ಮೀಸಲು ವಿಭಾಗದವರಿಗೆ ಇದ್ದ 40% ಕಟ್‌ಆಫ್ ಅಂಕಗಳನ್ನು ರಾಜ್ಯ ಸರಕಾರ ಮಾರ್ಪಡಿಸಿ, ಸಾಮಾನ್ಯ ವಿಭಾಗದವರಿಗೆ 65% ಮತ್ತು ಮೀಸಲು ವಿಭಾಗದವರಿಗೆ 65% ಎಂದು ನಿಗದಿಗೊಳಿಸಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತಳ್ಳಿಹಾಕಿದ್ದು ಮುಂದಿನ ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರಕಾರಕ್ಕೆ ಸೂಚಿಸಿತ್ತು.

ನೇಮಕಾತಿ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದ್ದು ಫಲಿತಾಂಶ ಘೋಷಣೆ ಮಾತ್ರ ಬಾಕಿಯಿದೆ. ಈ ಹಿನ್ನೆಲೆಯಲ್ಲಿ, ಉತ್ತರಪ್ರದೇಶ ಪ್ರಾಥಮಿಕ ಶಿಕ್ಷಾ ಮಿತ್ರ ಅಸೋಸಿಯೇಷನ್ ಸಹಿತ ಹಲವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿತ್ತು ಮತ್ತು ಹಲವರು ಮೇಲ್ಮನವಿ ಸಲ್ಲಿಸಿರುವುದರಿಂದ ಈ ಬಗ್ಗೆ ಸವಿಸ್ತಾರ ತನಿಖೆಯ ಅಗತ್ಯವಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News